ದುಬೈ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ 19 ಮಹಾಮಾರಿಯು ಎಲ್ಲಾ ಧಾರ್ಮಿಕ ಸ್ಥಳಗಳನ್ನು ಕೂಡಾ ತಿಂಗಳುಗಟ್ಟಲೆ ಮುಚ್ಚಿ ಹಾಕುವಂತೆ ಮಾಡಿದ್ದು ಇದೀಗ ಯುಎಯಿ ಸರಕಾರವು ಕೆಲವೊಂದು ಷರತ್ತು ಗಳನ್ನು ವಿಧಿಸಿ ಮಸೀದಿಗಳಿಗೆ ಸಾಮೂಹಿಕ ನಮಾಝ್ ನಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಇಂದಿನಿಂದ ಅವಕಾಶ ನೀಡಿದೆ.
ಸಾಮರ್ಥ್ಯದ 30% ಜನರಿಗೆ ಮಸೀದಿಗಳಲ್ಲಿ ಜಮಾ ಅತ್ ಆಗಿ ನಮಾಝ್ ನಿರ್ವಹಿಸಲು ಸರಕಾರ ಅವಕಾಶ ಮಾಡಿಕೊಟ್ಟಿದ್ದು ಅದರಂತೆ ದೇಶದಾದ್ಯಂತ ಇಂದು ಸುಬುಹಿ ನಮಾಝ್ ನೊಂದಿಗೆ ಮಸೀದಿಗಳ ಬಾಗಿಲು ಸಾರ್ವಜನಿಕರಿಗೆ ಮುಕ್ತವಾಗಿದೆ. ಕಳೆದ ರಾತ್ರಿಯ ಇಶಾ ನಮಾಝ್ ನಿರ್ವಹಿಸುವ ವರೆಗೂ “ನಮಾಝ್ ಗಳನ್ನು ಮನೆಯಲ್ಲೇ ನಿರ್ವಹಿಸಿ” ಎಂದು ಕರೆ ನೀಡುತ್ತಿದ್ದ ಮಸೀದಿಯ ಮಿನಾರಗಳಲ್ಲಿ ಇಂದು ಸುಬುಹಿ ನಮಾಝ್ ಗೆ “ನಮಾಝ್ ನಿರ್ವಹಿಸಲು ಬನ್ನಿ” ಎಂಬ ಆಹ್ವಾನ ಕೇಳಿ ಬಂತು.
ಆದರೆ ಶುಕ್ರವಾರದ ಜುಮಾ ನಮಾಝ್ ಗೆ ಇನ್ನೂ ಸರಕಾರದ ಅಧಿಕೃತ ಅನುಮತಿ ದೊರೆತಿಲ್ಲ, ಪ್ರತೀ ನಮಾಝ್ ಗೆ ಆದಾನ್ ಬಳಿಕ 5 ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದ್ದು ಸುಬುಹಿ ನಮಾಝ್ ಗೆ ಮಾತ್ರ 10 ನಿಮಿಷಗಳ ಸಮಯಾವಧಿ ನೀಡಲಾಗಿದೆ. ನಮಾಝ್ ಮುಗಿದ ತಕ್ಷಣ ಮಸೀದಿಯ ಬಾಗಿಲುಗಳು ಮುಚ್ಚಲ್ಪಡುತ್ತವೆ ಮತ್ತು ಆದಾನ್ ಹಾಗೂ ನಮಾಝ್ ಇವುಗಳಿಗೆ ಒಟ್ಟು 20 ನಿಮಿಷಗಳ ಸಮಯ ನಿಗದಿಗೊಳಿಸಲ್ಪಟ್ಟಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ