janadhvani

Kannada Online News Paper

ಎಸ್ಸೆಸ್ಸೆಫ್ ಕ್ಯೂ ಟೀಂ : ಗ್ರಾಟಿಟ್ಯೂಡ್ ವೆಬಿನಾರ್ ಸಿರೀಸ್ ಆರಂಭ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಕ್ಯೂ ಟೀಂ ಗ್ರಾಟಿಟ್ಯೂಡ್ ವೆಬಿನಾರ್ ಸಿರೀಸ್ ಇಶಾರ ಪಾಕ್ಷಿಕದ ಪ್ರಧಾನ ಸಂಪಾದಕ ಕೆಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು.

ಜುಲೈ 01ರಿಂದ 19ರ ವರೆಗೆ ಆನ್ಲೈನ್ ಮೂಲಕ ನಡೆಯಲಿರುವ ಆಟಿಟ್ಯೂಡ್ ವೆಬಿನಾರ್ ಸಿರೀಸ್ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತವಿರುವ ಎಸ್ಸೆಸ್ಸೆಫ್ ನಾಯಕರು, ಕ್ಯೂ ಟೀಂ ಕೋಡಿನೇಟರ್ಸ್, ಡೈರೆಕ್ಟರ್ಸ್, ಮೆಂಟರ್ಸ್ ಹಾಗೂ ಟ್ಯೂಟರ್ಸ್‌ಗಳು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಮನಶ್ಶಾಸ್ತ್ರಜ್ಞ, ಹೀಲಿಂಗ್ ಲೈಟ್ ಇಂಟರ್ನ್ಯಾಷನಲ್ ಕಾಲಿಕಟ್ ಇದರ ಚೇರ್‌ಮಾನ್ ಅಬ್ದು ಮಾನಿಪುರಂ ವೆಬಿನಾರ್ ಮುನ್ನಡೆಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಅಸ್ಸಖಾಫ್ ಮದನಿ ಅಧ್ಯಕ್ಷತೆ ವಹಿಸಿದರು.
ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಕಾರ್ಯದರ್ಶಿ ನವಾಝ್ ಭಟ್ಕಳ್ ಸಹಿತ ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಿದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!