janadhvani

Kannada Online News Paper

ಈಶ್ವರಮಂಗಳ: ಇತ್ತೀಚಿನ ದಿನಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆಯು ಹೆಚ್ಚುತ್ತಿದ್ದು , ರಕ್ತದ ಪೂರೈಕೆ ತುಂಬಾ ಕಡಿಮೆಯಾಗಿದೆ. ಕೋವಿಡ್ -19 ನಿಂದಾಗಿ ಹಲವಾರು ಕಡೆ ರಕ್ತದಾನ ಶಿಬಿರವು ನಡೆಯುತ್ತಿಲ್ಲ. ಇದೆಲ್ಲವನ್ನೂ ಮನಗಂಡು ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ,ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ಬ್ಲಡ್ ಸೈಬೋ ದ.ಕ ಜಿಲ್ಲೆ ಇದರ 158ನೇ ಬೃಹತ್ ರಕ್ತದಾನ ಶಿಬಿರವನ್ನು ಜೂನ್ 28 ಆದಿತ್ಯವಾರ ತ್ವೈಬಾ ಎಜುಕೇಶನ್ ಸೆಂಟರ್ ಈಶ್ವರಮಂಗಳದಲ್ಲಿ ನಡೆಸಲಾಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಝ ಮುಸ್ಲಿಯಾರ್ ಈಶ್ವರಮಂಗಳ ದುವಾಶೀರ್ವಚನ ನೀಡಿದರು .ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಅಧ್ಯಕ್ಷರಾದ ಅಬೂಬಕ್ಕರ್ ಲತೀಫಿ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಾಸಿರ್ ಕುಕ್ಕಾಜೆ ಸ್ವಾಗತಿಸಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀರಾಂ ಪಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತ್ವೈಭಾ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ,ಎಸ್.ವೈ.ಎಸ್.ಈಶ್ವರಮಂಗಳ ಸೆಂಟರ್ ಅಧ್ಯಕ್ಷರಾದ ಜಲೀಲ್ ಸಖಾಫಿ ಕರ್ನೂರು,ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂಶುದ್ದೀನ್ ಈಶ್ವರಮಂಗಲ,ಅಬ್ದುಲ್ ಖಾದರ್ ಕರ್ನೂರು,ಹಾಗೂ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಬ್ಲಡ್ ಸೈಬೋ ಉಸ್ತುವಾರಿ ಹಾರಿಸ್ ಅಡ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷರಾದ ಝುಬೈರ್ ಸಖಾಫಿ ಗಟ್ಟಮನೆ,ಡಿವಿಷನ್ ಉಪಾಧ್ಯಕ್ಷರಾದ ಹಮೀದ್ ಸಖಾಫಿ ರೆಂಜ,ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಳ ವಲಯಾಧ್ಯಕ್ಷರಾದ ಸಿ.ಎಂ.ಅಬೂಬಕ್ಕರ್ ಕರ್ನೂರು,ಕೆ.ಸಿ.ಎಫ್.ಕಾರ್ಯಕರ್ತರಾದ ಆದಂ ಹಾಜಿ ಕೆ.ಪಿ ,ತ್ವಾಹ ಸಅದಿ ಮೇನಾಲ, ಈಶ್ವರಮಂಗಲ ವಲಯ ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ಲ ಮೆನಸಿನಕಾನ ಉಪಸ್ಥಿತಿಯಿದ್ದರು.

ರಕ್ತದಾನ ಶಿಬಿರದಲ್ಲಿ ಎಸ್ಸೆಸ್ಸೆಫ್, ಎಸ್, ವೈ, ಎಸ್, ಹಾಗೂ ರಾಜಕೀಯ ನಾಯಕರು , ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು. ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಪುತ್ತೂರು ಡಿವಿಷನ್ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ ಅತೀ ಹೆಚ್ಚು ಯುನಿಟ್ ರಕ್ತ ದಾನ ಮಾಡಿ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ನಲ್ಲಿಯೇ ನೂತನ ದಾಖಲೆ ನಿರ್ಮಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೊ ಕೋ-ಅರ್ಡಿನೇಟರ್ ಕರೀಂ ಕದ್ಕಾರ್ ರವರು ರಕ್ತದಾನದ ಮಹತ್ವ, ರಕ್ತದಾನ ಮಾಡಿದ ವ್ಯಕ್ತಿಗೆ ಉಂಟಾಗುವ ಪ್ರಯೋಜನ ಇದರ ಬಗ್ಗೆ ಸಮಗ್ರವಾದ ಮಾಹಿತಿ ಕಾರ್ಯಕರ್ತರಿಗೆ ನೀಡೀದರು.ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಝೋನ್ ಉಸ್ತುವಾರಿ ಇಮ್ರಾನ್ ರೆಂಜಲಾಡಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಹಸನ್ ನಗರ, ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಕೋಶಧಿಕಾರಿ ಸಂಶುದ್ದೀನ್ ಹನೀಫಿ .ಎಸ್, ವೈ, ಎಸ್ ಈಶ್ವರಮಂಗಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಮೀದ್ ಕೊಯಿಲ, ಎಸ್, ವೈ, ಎಸ್ ನಾಯಕ ಉಮ್ಮರ್ ಸ ಅದಿ,ಶೆರೀಫ್ ಪಿ ಎಚ್. ಸಾಧಿಕ್ ಇಂದಾದಿ ಮೇನಾಲ, ಹುಸೈನ್ ಜೌಹರಿ, ಶಫೀಕ್ ಸ ಅದಿ, ಶಿಹಾಬುದ್ದೀನ್ ಸಖಾಫಿ, ಸೆಕ್ಟರ್ ಬ್ಲಡ್ ಸೈಬೊ ಉಸ್ತುವಾರಿ ಸಲೀಂ ಝುಹ್ರಿ, ಕ್ಯಾಂಪಸ್ ಕಾರ್ಯದರ್ಶಿ ನೌಫಾನ್ ಕಾವು, ಬಸೀರ್ ಮೀನಾವು, ಉಪಸ್ಥಿತರಿದ್ದರು.

ಈಶ್ವರಮಂಗಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಾಸಿರ್ ಕುಕ್ಕಾಜೆ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com