janadhvani

Kannada Online News Paper

ಸೌದಿ: ಕೋವಿಡ್ ಮುಕ್ತಗೊಳ್ಳದೆ ಪ್ರವೇಶವಿಲ್ಲ- ರೀ ಎಂಟ್ರಿ ವಿಸ್ತರಣೆ

ರಿಯಾದ್: ಸಂಪೂರ್ಣ ಕೋವಿಡ್ ಮುಕ್ತಗೊಳ್ಳುವವರೆಗೆ ರಜೆಯಲ್ಲಿ ಸ್ವದೇಶಕ್ಕೆ ತೆರಳಿದವರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶವಿಲ್ಲ ಎಂದು ಜನರಲ್ ಡೈರಕ್ಟರೇಟ್ ಆಫ್ ಪಾಸ್‌ಪೋರ್ಟ್ (ಜವಾಝಾತ್) ತಿಳಿಸಿದೆ.

ಸೌದಿಯಲ್ಲಿನ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದ ನಂತರವಷ್ಟೇ ವಿದೇಶೀಯರ ಮರು ಪ್ರವೇಶ ವೀಸಾಗಳಿಗೆ ಅನುಮತಿ ನೀಡಲಾಗುವುದು. ಸೌದಿಗೆ ಹಿಂದಿರುಗುವ ಸಮಯವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಮರು ಪ್ರವೇಶ ವೀಸಾ(ರೀ ಎಂಟ್ರೀ) ವಿಸ್ತರಣೆ ಬಗ್ಗೆ ಸಚಿವಾಲಯ ಪ್ರಕಟಿಸಲಿದೆ. ಇದರೊಂದಿಗೆ,ಸ್ವದೇಶಕ್ಕೆ ತೆರಳಿದ ನಂತರ ರೀ ಎಂಟ್ರಿ ವಿಸ್ತರಿಸಲಾಗದೆ ಉಳಿದಿರುವವರಿಗೂ ಮರು ಪ್ರವೇಶ ಸಾಧ್ಯವಾಗಲಿದೆ. ಈ ಕುರಿತು ಅಧಿಕೃತ ಪ್ರಕಟಣೆಗಾಗಿ ಕಾಯಬೇಕೆಂದು ಜವಾಝಾತ್ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ.

ಸೌದಿ ಅರೇಬಿಯಾದಿಂದ ತೆರಳಿದ ನಂತರ ಅಂತರರಾಷ್ಟ್ರೀಯ ವಿಮಾನಗಳು ರದ್ದಾದ ಕಾರಣ ಲಕ್ಷಾಂತರ ವಲಸಿಗರು ಸ್ವದೇಶದಲ್ಲೇ ಬಾಕಿ ಉಳಿದಿದ್ದು,ರೀ ಎಂಟ್ರಿ ವಿಸ್ತರಿಸಲು ಸಾಧ್ಯವಾಗದೆ ಕೆಲಸ ಕಳಕೊಳ್ಳುವ ಭೀತಿಯಲ್ಲಿದ್ದವರಿಗೆ ಇದೊಂದು ಆಶಾದಾಯಕ ಸುದ್ದಿಯಾಗಿದೆ.

error: Content is protected !! Not allowed copy content from janadhvani.com