janadhvani

Kannada Online News Paper

KCF ಜಬಲುನ್ನೂರ್ ಅಧ್ಯಕ್ಷರಾದ ಅಬ್ಬಾಸ್ ಸಾಲ್ಮರ ಮಕ್ಕಾದಲ್ಲಿ ನಿಧನ

ಮಕ್ಕತುಲ್ ಮುಕರ್ರಮಃ: KCF ಜಬಲನ್ನೂರು ಯುನಿಟ್ ಅದ್ಯಕ್ಷರೂ DKSC ಮೂಳೂರು ಹಾಗೂ GCC ಸುನ್ನಿ ಫ್ರೆಂಡ್ಸ್ ಬನ್ನೂರು, ಮಜ್ಲೀಸ್ ಗಾಣೆಮಾರ್, ದಾರುಲ್ ಇರ್ಶಾದ್ ಮಾಣೆ ಸಂಸ್ಥೆಯ ಸಹಾಯಿಯೂ ಆಗಿದ್ದ ಅಬ್ಬಾಸ್ ಸಾಲ್ಮರ ಹೃದಯಾಘಾತದಿಂದ ಮಕ್ಕಾದಲ್ಲಿ ನಿಧನ ಹೊಂದಿದ್ದಾರೆ.

ಹಲವಾರು ಸಂಘ, ಸಂಸ್ಥೆಗಳ ಸಜೀವ ಸದಸ್ಯರಾಗಿಯೂ, ಮಾರ್ಗದರ್ಶಕರೂ, ಕೊಡುಗೈದಾನಿಯಾದ ಅಬ್ಬಾಸ್ ಸಾಲ್ಮರ ಅವರನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಮಕ್ಕಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಮೃತರ ಹೆಸರಿನಲ್ಲಿ ಖುರ್’ಆನ್ ಪಾರಾಯಣ, ತಹ್ಲೀಲ್ ಹಾಗೂ ಮಯ್ಯಿತ್ ನಮಾಝ್ ನಿರ್ವಹಿಸುವಂತೆ ಇಬ್ರಾಹಿಂ ಪಾಪ್ಲಿ ಬನ್ನೂರು ಜಿದ್ದಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com