janadhvani

Kannada Online News Paper

ಕೆಸಿಎಫ್ ಒಮಾನ್ ನಿಝ್ವ ಝೋನ್ ಇಫ್ತಾರ್ ಕಿಟ್ ಮತ್ತು ದೈನಂದಿನ ಆವಶ್ಯಕ ವಸ್ತುಗಳ ಕಿಟ್ ವಿತರಣೆ

ಕೋವಿಡ್ 19 ಲೋಕ್ ಡೌನ್ ನಿಂದ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿರುವ ಅನಿವಾಸಿ ಕನ್ನಡಿಗರಿಗೆ ಮತ್ತು ಇತರರನ್ನು ಗುರುತಿಸಿ ಕೆಸಿಎಫ್ ಒಮಾನ್ ನಿಝ್ವ ಝೋನ್ ವತಿಯಿಂದ ಆಹಾರ ಪದಾರ್ಥ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ವನ್ನು ಮುಂದುವರಿಸುತ್ತಿದ್ದು ಇದೀಗ ಉಪವಾಸಿಗರಿಗೆ ಇಫ್ತಾರ್ ಕಿಟ್ ಗಳನ್ನು ವಿತರಿಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ನಿಝ್ವ ಝೋನ್ ಅಧ್ಯಕ್ಷರಾದ ಬಾಷ ತೀರ್ಥಹಳ್ಳಿ ಮತ್ತು ಕೆಸಿಎಫ್ ಒಮಾನ್ ರಾಷ್ಟ್ರೀಯ ಆಡಳಿತ ವಿಭಾಗದ ಅಧ್ಯಕ್ಷರಾದ ಖಾಸಿಂ ಹಾಜಿ ಅಳಕೆಮಜಲು ಹಾಗೂ ನಿಝ್ವ ಝೋನ್ ನಾಯಕರಾದ ಅಬ್ದುಲ್ ವಾರಿಸ್ ಮಣಿಪುರ, ಹುಸೈನ್ ತೀರ್ಥಹಳ್ಳಿ,ಲತೀಫ್ ಸುಳ್ಯ, ಕಬೀರ್ ಮಿಸ್ಬಾಹಿ,ಇಬ್ರಾಹಿಮ್ ಕಟ್ಪಾಡಿ,ಸಾದಿಕ್ ಕೈಕಂಬ ರಮೀಝ್ ಮಣಿಪುರ, ಹನೀಫ್ ಮೂಡಬಿದ್ರೆ ,ತೌಫೀಕ್ ಕೈಕಂಬ,ಇಮ್ರಾನ್ ಬಜ್ಪೆ,ಬಶೀರ್ ಶಬಾನ್ ಹಾಗೂ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.