janadhvani

Kannada Online News Paper

ಮೇ.24 ಆದಿತ್ಯವಾರ ಈದುಲ್ ಫಿತ್ರ್ ಆಚರಣೆ- ಖಾಝಿ ಖುರ್ರತುಸ್ಸಾದಾತ್ ಘೋಷಣೆ

ಮಂಗಳೂರು: ಇಂದು ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಮೇ. 24 ಆದಿತ್ಯವಾರ ಈದುಲ್ ಫಿತ್ರ್ ಆಚರಣೆ.

ಶುಕ್ರವಾರ ಅಸ್ತಮಿಸಿದ ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಮೇ. 24 ಆದಿತ್ಯವಾರ ಈದುಲ್ ಫಿತ್ರ್ (ರಂಝಾನ್ ಹಬ್ಬ) ಆಚರಿಸಲಾಗುವುದು ಎಂದು ಗೌರವಾನ್ವಿತ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯವರಾದ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಘೋಷಿಸಿದ್ದಾರೆ.

ಈದುಲ್ ಫಿತ್ರ್ ಮೇ. 24 ಆದಿತ್ಯವಾರದಂದು ಆಚರಿಸಲಾಗುವುದೆಂದು ಮಂಗಳೂರು ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಹಾಗೂ ಉಡುಪಿ, ಹಾಸನ,ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿಗಳಾದ ತಾಜುಲ್ ಫುಖಹಾಅ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.