janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಈಸ್ಟ್ ಝೋನ್‌ನ ತರ್ತೀಲ್ ಸ್ಪರ್ಧಾ ಕಾರ್ಯಕ್ರಮ ಸಮಾಪ್ತಿ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಝೋನ್ ಇದರ ಉಪ ಸಮಿತಿಯಾದ ಕ್ಯಾಂಪಸ್ ಹಾಗೂ ವಿಸ್ಡಮ್ ಟೀಂ ವತಿಯಿಂದ ಕ್ಯಾಂಪಸ್ ವಿಧ್ಯಾರ್ಥಿಗಳಿಗಾಗಿ ಖುರ್‌ಆನ್ ತರ್ತೀಲ್-2020 ಮೇ.14ರಂದು ನಡೆದ ಆನ್‌ಲೈನ್ ಸ್ಪರ್ಧಾ ಕಾರ್ಯಕ್ರಮವನ್ನು  ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉಧ್ಘಾಟನಾ ಸಮಾರಂಭವು ಝೋನ್‌ ಅಧ್ಯಕ್ಷ ಅಯ್ಯೂಬ್ ಮಹ್ಲರಿ ಕಾವಲ್ ಕಟ್ಟೆಯವರ ಘನ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ  ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿಯವರ ಪ್ರಾರ್ಥನೆಯೊಂದಿಗೆ ನೆರವೇರಿತ್ತು.

ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್
ಸಖಾಫಿ ಮೂಡಬಿದ್ರೆ
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಝೋನ್ ವಿಸ್ಡಮ್ ಕನ್ವೀನರ್
ಅಬ್ದುರ್ರಹ್ಮಾನ್ ಪದ್ಮುಂಜರವರು ಸ್ವಾಗತಿಸಿದರು.

ಕ್ಯಾಂಪಸ್ ಜೂನಿಯರ್,ಕ್ಯಾಂಪಸ್ ಸೀನಿಯರ್,ಕ್ಯಾಂಪಸ್ ದಅವಾ ಜೂನಿಯರ್,ಕ್ಯಾಂಪಸ್ ದಅವಾ ಸೀನಿಯರ್ ಎಂಬ ನಾಲ್ಕು ವಿಭಾಗಗಳಲ್ಲಿ ಡಿವಿಷನ್ ಗಳಿಂದ ಆಯ್ಕೆಯಾದ ಸುಮಾರು 60 ರಷ್ಟು ಸ್ಪರ್ಧಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ
ಖುರ್‌ಆನ್ ಪಾರಾಯಣ, ಖುರ್‌ಆನ್ ಹಿಫ್ಲ್, ಖುರ್‌ಆನ್ ಕ್ವಿಝ್ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಹೆಚ್ಚು ಅಂಕ ಪಡೆಡು ಪುತ್ತೂರು ಡಿವಿಷನ್ ಚಾಂಪಿಯನ್ ಪಟ್ಟ ಆಲಂಕರಿಸಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಝೋನ್ ಕೋಶಾಧಿಕಾರಿ  ಮುಹಮ್ಮದ್ ರಫೀಖ್ ಅಹ್ಸನಿ ಕುಪ್ಪೆಟ್ಟಿಯವರು ವಹಿಸಿದ್ದರು.
ಝೋನ್ ಉಪಾಧ್ಯಕ್ಷ  ಮಸ್ಊದ್ ಸಅದಿ ಪದ್ಮುಂಜರವರು ಪ್ರಾರ್ಥನೆಗೆ ನೇತೃತ್ವ ನೀಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ  ಹಾಫಿಲ್ ಸುಫಿಯಾನ್ ಸಖಾಫಿ ರಾಜ್ಯ ಕಾರ್ಯದರ್ಶಿಗಳಾದ  ಹಾಫಿಲ್ ಯಅಖೂಬ್ ಸಅದಿ ನಾವೂರು, ಸಿರಾಜುದ್ಧೀನ್ ಸಖಾಫಿ ಕನ್ಯಾನ, ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ,
ಜಿಲ್ಲಾ ಕೋಶಾಧಿಕಾರಿ, ಮುಹಮ್ಮದಲಿ ತುರ್ಕಳಿಕೆ, ಝೋನ್ ಉಸ್ತುವಾರಿ ರಶೀದ್ ಹಾಜಿ ವಗ್ಗ, ಝೋನ್ ಅಧ್ಯಕ್ಷ  ಅಯ್ಯೂಬ್ ಮಹ್ಲರಿ ಕಾವಲ್ ಕಟ್ಟೆ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದರು ಬಳಿಕ ಕಾರ್ಯಕ್ರಮಕ್ಕೆ  ಶುಭ ಹಾರೈಸಿದರು.

ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಹಾಗೂ ಸದಸ್ಯ ಅಬೂಬಕ್ಕರ್ ಹಿಮಮಿ ಸಖಾಫಿ ವಿಟ್ಲ ಕಾರ್ಯಕ್ರಮವನ್ನು ನಿರೂಪಿಸಿದರು.
ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ವಂದಿಸಿದರು.

error: Content is protected !! Not allowed copy content from janadhvani.com