janadhvani

Kannada Online News Paper

ವಿಶ್ವ ಪ್ರಾರ್ಥನಾ ದಿನ- ಭಾರತದಿಂದ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್

ಕೋವಿಡ್ ಮಹಾ ಮಾರಿಯಿಂದ ಮುಕ್ತಿ ಹೊಂದಲು ವಿಶ್ವ ಸಂಸ್ಥೆಯೊಂದಿಗೆ ಕೈ ಜೋಡಿಸಿ ಯು ಎ ಇ ಯ ಪ್ರಮುಖ ಸಾಂಸ್ಕೃತಿಕ ಯೋಜನಾ ಸಂಸ್ಥೆಯಾದ ಯೂಮನ್ ಫ್ರಟೆರ್ನಿಟಿ ಸಂಸ್ಥೆಯು ವಿಶ್ವ ಪ್ರಾರ್ಥನಾ ಸಮ್ಮೇಳನವು ಇಂದು ಗುರುವಾರ ನಡೆಯಲಿದೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಈ ಕುರಿತು ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ .


ಭಾರತದಿಂದ ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ.

ಕೋವಿಡ್ ಮಹಾಮಾರಿಯಿಂದ ಮುಕ್ತಿಹೊಂದಲು ವಿಜ್ಞಾನಿಗಳು, ವಿಶ್ವ ಅರೋಗ್ಯ ಸಂಸ್ಥೆ, ಹಾಗು ವಿಶ್ವದ ಹಲವಾರು ಸಂಘ ಸಂಸ್ಥೆಗಳು ನಡೆಸುವ ಹೋರಾಟಕೆ ಬೆಂಬಲ ಮತ್ತು ಶೀಘ್ರ ಫಲ ಕಾಣಲು ಪ್ರಾರ್ಥನೆಯಿಂದ ಸಾಧ್ಯ ಎಂದು ವಿಶ್ವ ಸಂಸ್ಥೆಯ ಸೆಕ್ರಟರಿ ಜೆನರಲ್ ಅಂಟೋನಿಯೋ ಗುಟಾರಸ್ ತಿಳಿಸಿದರು. ಶೈಖುಲ್ ಅಝ್ಹರ್ ಶೈಖ್ ಅಹ್ಮದುಲ್ ತ್ವಯಿಬ್ ಮತ್ತು ಪೋಪ್ ಫ್ರಾಸಿಸ್ ಸೇರಿದಂತೆ ವಿವಿಧ ಅರಬ್ ರಾಜ್ಯ ಮತ್ತು ಯುರೋಪ್ ರಾಷ್ಟ್ರಗಳ ಮುಖಂಡರುಗಳು ಪ್ರಾರ್ಥನಾ ದಿನಕ್ಕೆ ಬೆಂಬಲ ಸೂಚಿಸಿದ್ದಾರೆ.


ಯು ಎ ಇ ಯ ಹ್ಯೂಮನ್ ಫ್ರಟೆರ್ನಿಟಿ ಸಂಸ್ಥೆಯ ಅಪೇಕ್ಷೆಯಮೇರೆಗೆ ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಉಸ್ತಾದರು ಇಂದು ಮದ್ಯಾಹ್ನ 12 ಗಂಟೆಗೆ ಆನ್ಲೈನ್ ಮೂಲಕ ನಡೆಸುವ ಪ್ರಾರ್ಥನಾ ಸಂಘಮದಲ್ಲಿ ಸಾವಿರಾರು ಮಂದಿ ವೀಕ್ಷಿಸಲಿದ್ದಾರೆ
https:www.youtube.com/sheikhaboobacker
ಎಂಬ ಯೂಟ್ಯೂಬ್ ಚಾನೆಲ್ ಮೂಲಕ
ಭಾರತೀಯ ಸಮಯ 12 ಗಂಟೆಗೆ ವೀಕ್ಷಿಸಬಹುದು .

error: Content is protected !! Not allowed copy content from janadhvani.com