ದೋಹಾ: ಕೊರೋನ ವಿರುದ್ದ ಮುನ್ನೆಲೆಯಲ್ಲಿ ಕಾರ್ಯಾಚರಿಸುವ ವಿಶ್ವಾದ್ಯಂತವಿರುವ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದ ಖತರ್ ಏರ್ವೇಸ್, 1 ಲಕ್ಷ ಉಚಿತ ಟಿಕೆಟ್ ಘೋಷಿಸಿದೆ.
ಉಚಿತ ಟಿಕೆಟ್ಗಾಗಿ, ಖತರ್ ಏರ್ವೇಸ್ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಖತರ್ನ ಸಮಯ ಮೇ 18 ರಂದು ರಾತ್ರಿ 11.59 ಕ್ಕೆ ಈ ನೋಂದಣಿ ಕೊನೆಗೊಳ್ಳುತ್ತದೆ. ಅರ್ಜಿ ಭರ್ತಿ ಮಾಡಿ ನೋಂದಣಿ ಪೂರ್ಣಗೊಳಿಸಿದವರಿಗೆ ಆದ್ಯತೆಗೆ ಅನುಗುಣವಾಗಿ ಪ್ರಮೋಷನ್ ಕೋಡ್ ಸಿಗುತ್ತದೆ.
ಪ್ರಪಂಚದಾದ್ಯಂತದ ಎಲ್ಲ ಆರೋಗ್ಯ ಕಾರ್ಯಕರ್ತರಿಗೂ ಉಚಿತ ಟಿಕೆಟ್ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನ್ಯಾಯಯುತ ವಾಗಿಸಲು, ಪ್ರತಿ ದೇಶದಲ್ಲಿ ಆ ದೇಶದ ಜನಸಂಖ್ಯೆಗೆ ಅನುಗುಣವಾಗಿ ದಿನನಿತ್ಯ ನಿಶ್ಚಿತ ಟಿಕೆಟ್ಗಳನ್ನು ಹಂಚಲಾಗುತ್ತದೆ. ಟಿಕೆಟ್ ಹಂಚಿಕೆಯನ್ನು ಪ್ರತಿದಿನ 12.01 ಕ್ಕೆ ಬಿಡುಗಡೆ ಮಾಡಲಾಗುತ್ತದೆ.
ಪ್ರಮೋಷನ್ ಕೋಡ್ ಪಡೆದ ಆರೋಗ್ಯ ಕಾರ್ಯಕರ್ತರು ಖತರ್ ಏರ್ವೇಸ್ ನಿರ್ವಹಿಸುವ ವಿಶ್ವದ ಯಾವುದೇ ನಗರಕ್ಕೆ ಎರಡು ಎಕಾನಮಿ ಕ್ಲಾಸ್ ರಿಟರ್ನ್ ಟಿಕೆಟ್ ಗಳನ್ನು ಕಾಯ್ದಿರಿಸಬಹುದು. ಎರಡನೇ ಟಿಕೆಟ್ ಜೊತೆಯಲ್ಲಿರುವ ವ್ಯಕ್ತಿಗೆ ನೀಡಬಹುದಾಗಿದೆ. ನವೆಂಬರ್ 26 ರ ಮೊದಲು ಟಿಕೆಟ್ ಕಾಯ್ದಿರಿಸಬೇಕು. 2020 ರ ಡಿಸೆಂಬರ್ 10 ರವರೆಗೆ ಟಿಕೆಟ್ ಕಾಯ್ದಿರಿಸಬಹುದು. ವಿಶೇಷ ಶುಲ್ಕವಿಲ್ಲದೆ ಯಾವುದೇ ಸಮಯದಲ್ಲಿ ಪ್ರಯಾಣದ ಸ್ಥಳ ಅಥವಾ ದಿನಾಂಕವನ್ನು ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು.
Hi,
My name is Latha im from Karnataka Bangalore. Im came to Qatar on 5th of march 2020 in visit vise to meet my friend but i got stuck in qatar because of corona. I dont have any job are place to leave here please help to go from qatar to India Bangalore. Please i begg all sisters and brothers help me.
Nive nimma no matthu vilasavannu nanage kaluhisi
Nivu nimma no matthu vilasa kaluhisi
I am working in house cook
Me also want go India I come here 4 month finish