ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಕರ್ಫ್ಯೂ ಸಡಿಲಿಕೆ, ರಮಝಾನ್ ಅಂತ್ಯದವರೆಗೂ ಮುಂದುವರಿಯಲಿದೆ. ಕಳೆದ ತಿಂಗಳು 17 ದಿನಗಳ ಕಾಲ ಘೋಷಿಸಲಾಗಿದ್ದ ಕರ್ಫ್ಯೂ ಸಡಿಲಿಕೆಯನ್ನು ಮೇ 22 ರವರೆಗೆ ಅಂದರೆ ರಮಝಾನ್ ಮುಗಿಯುವ ವರೆಗೆ ವಿಸ್ತರಿಸಲಾಗಿದೆ.
ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಲಭ್ಯವಿರುವ ವಿನಾಯ್ತಿಯನ್ನು ಮೇ 22 ರವರೆಗೆ ಮುಂದುವರಿಸಲಾಗುವುದು ಎಂದು ಗೃಹ ಸಚಿವಾಲಯ ಪ್ರಕಟಿಸಿದೆ. ಮಕ್ಕಾ ಮತ್ತು ಪ್ರಸಕ್ತ ಐಸೊಲೇಷನ್ ಜಾರಿಯಲ್ಲಿರುವ ಪ್ರದೇಶಗಳಲ್ಲಿ 24 ಗಂಟೆಗಳ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಮೇ 23 ರಿಂದ ಮೇ 27 ರವರೆಗೆ ಪೂರ್ಣ ಸಮಯದ ಕರ್ಫ್ಯೂ ಮುಂದುವರಿಯಲಿದೆ. ಈ 24 ಗಂಟೆಗಳ ಕರ್ಫ್ಯೂ ಅನ್ನು ಮೇ.27ರ ಬಳಿಕ ವಿಸ್ತರಿಸಬೇಕೆ ಎಂಬುದರ ಬಗ್ಗೆ ಗೃಹ ಸಚಿವಾಲಯ ನಂತರ ನಿರ್ಧರಿಸಲಿದೆ.
ಇಂದು, ಜಿಝಾನ್ನ ಬೈಶ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿಗೆ 24 ಗಂಟೆಗಳ ಕಾಲ ಸಂಪೂರ್ಣವಾಗಿ ಐಸೊಲೇಷನ್ ಏರ್ಪಡಿಸಲಾಗಿದೆ. ಪಾಸ್ಗಳೊಂದಿಗೆ ವಿನಾಯಿತಿ ಇರುವವರನ್ನು ಹೊರತುಪಡಿಸಿ ಈ ಪ್ರದೇಶಕ್ಕೆ ಯಾವುದೇ ಪ್ರವೇಶವಿರುವುದಿಲ್ಲ. ಹತ್ತಿರದ ಅಂಗಡಿಗಳಿಂದ ಸರಕುಗಳನ್ನು ಖರೀದಿಸಲು ಜನರು ಬೆಳಗ್ಗೆ 9 ರಿಂದ ಸಂಜೆ 5 ರ ಮಧ್ಯೆ ಹೊರಡಬಹುದು. ವಾಹನದಲ್ಲಿ ಒಬ್ಬ ವ್ಯಕ್ತಿ ಮಾತ್ರ ಯಾತ್ರೆ ಕೈಗೊಳ್ಳಬಹುದು. ಜಿಲ್ಲೆಯನ್ನು ತೊರೆದರೆ ದಂಡ ವಿಧಿಸಲಾಗುತ್ತದೆ. ಅಗತ್ಯ ಸೇವೆಗಳನ್ನು ಒದಗಿಸುವ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು.
ಸೌದಿಯಲ್ಲಿ ಕೋವಿಡ್‌ನಿಂದ ಇಂದು 9 ಮಂದಿ ಮೃತಪಟ್ಟಿದ್ದು,ಹೊಸತಾಗಿ 1911ಮಂದಿಗೆ ಕೋವಿಡ್ ದೃಢಪ್ಪಟ್ಟಿದೆ. ಇದರೊಂದಿಗೆ ಮರಣ ಸಂಖ್ಯೆ 264ಕ್ಕೆ ಏರಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 42,925 ಆಗಿದೆ. ಇಂದು ರೋಗಮುಕ್ತಿ ಪಡೆದವರ ಸಂಖ್ಯೆಯಲ್ಲಿ ದಾಖಲೆ ರಚಿಸಲ್ಪಟ್ಟಿದ್ದು, ಇಂದು ಒಂದೇ ದಿನ 2,520 ಜನರು ರೋಗ ಮುಕ್ತರಾಗಿದ್ದಾರೆ. ಇದರೊಂದಿಗೆ ಒಟ್ಟು ರೋಗಮುಕ್ತರ ಸಂಖ್ಯೆ 15,257 ಕ್ಕೆ ಏರಿದೆ. ರೋಗಮುಕ್ತಿ ಪಡೆದವರ ಸಂಖ್ಯೆ ಹೆಚ್ಚಾದಂತೆ, ಇದೀಗ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 27,404 ಕ್ಕೆ ಇಳಿದಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ