janadhvani

Kannada Online News Paper

ಮಂಗಳೂರು: ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೋರಮ್ ವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ಮುನ್ನೂರರಷ್ಟು ಕೋವಿಡ್ ವಾರಿಯರ್ಸ್ ಗೆ ಸನ್ಮಾನಾರ್ಥವಾಗಿ

ಫಲಾಹಾರ ಕಿಟ್ ನೀಡಿ ಗೌರವಿಸಲಾಯಿತು.

ತಮ್ಮ ಜೀವ-ಜೀವನವನ್ನು ಒತ್ತೆಯಿಟ್ಟು ಮಾರಕ ಕೊರೋನಾ ವಿರುದ್ಧ ಹೋರಾಡುತ್ತಿರುವ
ವೈದ್ಯರು, ದಾದಿಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗಳನ್ನು ಗೌರವದಿಂದ ಗುರುತಿಸುವುದು ಸಮಾಜದ ಕರ್ತವ್ಯವಾಗಿದೆ. ದೇಶಾದ್ಯಂತದ ಎಲ್ಲರಿಗೂ ಪ್ರೇರಣೆಯಾಗುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಫಲಾಹಾರ ಕಿಟ್ ನೀಡಲಾಯಿತು ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ. ಡಾ. ಶೇಖ್ ಬಾವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೌದಿ ಅರೇಬಿಯ, ಯುಎಇ, ಕತ್ತಾರ್, ಕುವೈತ್, ಬಹ್ರೈನ್, ಒಮಾನ್ ಮಲೇಷಿಯಾ, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್; ಕೋರೋನಾ ಲಾಕ್‌ಡೌನ್ ನಿಂದಾಗಿ ವಿವಿಧ ದೇಶಗಳಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ,ಔಷಧಿ, ಅನ್ನಾಹಾರ ಪೂರೈಕೆ ಮುಂತಾದ ನೆರವುಗಳನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೆಸಿಎಫ್ ಯುಎಇ ಘಟಕವು ಅಲ್ಲಿನ ಪೊಲೀಸ್ ಇಲಾಖೆಯ ವಿಶೇಷ ತರಬೇತಿಯನ್ನು ಪಡೆದು ಕೋವಿಡ್ ವಾರಿಯರ್ಸ್ ತಂಡವಾಗಿ ಕಾರ್ಯಾಚರಿಸಿದ್ದು; ಅರಬ್ ಚಾನಲ್ ಗಳಲ್ಲೂ ಸುದ್ದಿ ಬಿತ್ತರವಾಗಿತ್ತು.

ಕೊವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸುವ ಮೂಲಕ ಕೆಸಿಎಫ್ ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಸಿಎಫ್ ಪರವಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಅಶ್ರಫ್ ಕಿನಾರ ಕೋವಿಡ್ ವಾರಿಯರ್ಸ್ ಗೆ ಫಲಾಹಾರ ಕಿಟ್ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ರಾದ ಸದಾಶಿವ ಹಾಗೂ ಢಾ ಜೂಲಿಯಟ್ ಸಲ್ದಾನ ನೇತೃತ್ವದಲ್ಲಿ ಸನ್ಮಾನಿಸಿದರು.‌

error: Content is protected !! Not allowed copy content from janadhvani.com