ಮಂಗಳೂರು (ಜನಧ್ವನಿ ವರದಿ): ಕೊರೊನಾ ವೈರಸ್ ನ ತೀವ್ರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಹಂಪನಕಟ್ಟೆಯ 3 ವಾಣಿಜ್ಯ ಸಂಕೀರ್ಣಗಳ ಮುಸ್ಲಿಂ ವರ್ತಕರು ಬಟ್ಟೆ ಅಂಗಡಿ, ಫ್ಯಾನ್ಸಿ ಸ್ಟೋರ್ ಮತ್ತು ಇತರ ಅಂಗಡಿಗಳನ್ನು ಈದ್ ಹಬ್ಬದ ವರೆಗೆ ತೆರೆಯದಿರಲು ತೀರ್ಮಾನಿಸಿದ್ದಾಗಿ ವರದಿಯಾಗಿದೆ.
ಮುಸ್ಲಿಂ ವರ್ತಕರ ಸಂಘಟನೆ ಕೆ ಟಿ ಎ ಯೂತ್ ಫಾರಂ ನ ಅಧ್ಯಕ್ಷರಾದ ಮೌಶಿರ್ ಅಹ್ಮದ್ ಸಾಮಣಿಗೆ ಈ ಬಗ್ಗೆ ಮಾಹಿತಿ ನೀಡಿ ಈದ್ ಹಬ್ಬದ ವರೆಗೆ ಹಂಪನಕಟ್ಟೆಯ ಟೋಕ್ಯೋ ಮಾರ್ಕೆಟ್, ಅಕ್ಬರ್ ಕಾಂಪ್ಲೆಕ್ಸ್, ಕುನಿಲ್ ಕಾಂಪ್ಲೆಕ್ಸ್ ಮೊದಲಾದ ವಾಣಿಜ್ಯ ಸಂಕೀರ್ಣಗಳ ಎಲ್ಲಾ ವರ್ತಕರು ತಮ್ಮ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದ್ದು ಈ ಬಗ್ಗೆ ಅಂತಿಮ ತೀರ್ಮಾನ ಆಗುವ ವರೆಗೂ ಎಲ್ಲಾ ಸಮುದಾಯದ ವರ್ತಕರು ತಮ್ಮ ಜೊತೆ ಕೈ ಜೋಡಿಸುವುದಾಗಿ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಉದ್ಯಮಿಗಳೂ ಈ ಬಗ್ಗೆ ಸಹಕಾರ ನೀಡುವುದಾಗಿ ಮಾತು ನೀಡಿದ್ದು ಸರಕಾರ ಮೇ 17ವ್ರ ವರೆಗೂ ಲಾಕ್ ಡೌನ್ ವಿಸ್ತರಿಸಿದ್ದು ಅದನ್ನು ವರ್ತಕರೂ ಬೆಂಬಲಿಸಲಿದ್ದಾರೆ ಎಂದರು.
ಉಡುಪಿ ಖಾಝಿ ಬಹು ಬೇಕಲ ಇಬ್ರಾಹಿಂ ಮುಸ್ಲಿಯಾರ್ ರವರು ಕೂಡ ಈ ಹಿಂದೆಯೇ ಲಾಕ್ ಡೌನ್ ಅನ್ನು ಈದ್ ಹಬ್ಬ ಮುಗಿಯುವ ವರೆಗೂ ಮುಂದೂಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದನ್ನು ಸ್ಮರಿಸಬಹುದು.