janadhvani

Kannada Online News Paper

ಕುವೈತ್ ಸಿಟಿ: ಕುವೈತ್‌ನಿಂದ ಊರಿಗೆ ಮರಳಲು ಬಯಸುವ ಭಾರತೀಯರಿಗಾಗಿ ಭಾರತೀಯ ರಾಯಭಾರ ಕಚೇರಿಯು ವಿಶೇಷ ವೆಬ್ ಪುಟವನ್ನು ಸ್ಥಾಪಿಸಿದೆ. ಮರಳಲು ಬಯಸುವವರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮಾತ್ರ ನೋಂದಣಿ ಪ್ರಕ್ರಿಯೆಯ ಉದ್ದೇಶವಾಗಿದ್ದು, ವಿಮಾನಗಳು ಪುನರಾರಂಭಿಸುವ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.

ಮರಳಲು ಇಚ್ಛಿಸುವ ವಲಸಿಗ ಕುಟುಂಬದ ಪ್ರತಿಯೊಬ್ಬ ವ್ಯಕ್ತಿ ಕೂಡ ನೋಂದಣಿ ನಡೆಸಬೇಕು. ಕಂಪನಿಗಳ ನೌಕರರು ವೈಯಕ್ತಿಕವಾಗಿ ನೋಂದಣಿಯನ್ನು ಪೂರ್ಣಗೊಳಿಸಬೇಕು. ವಿಮಾನಗಳು ಪ್ರಾರಂಭವಾಗುವ ಬಗ್ಗೆ ನಂತರ ಪ್ರಕಟಿಸಲಾಗುವುದು.

ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅನುಸರಿಸುತ್ತಿರುವ ನಿಯಮಗಳಿಗೆ ಅನುಗುಣವಾಗಿ ಪ್ರಯಾಣ ಬೆಳಸಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ. indembkwt.com/eva/ ನಲ್ಲಿ ನೋಂದಾಯಿಸಿ ಕೊಳ್ಳಬಹುದು. ಈಗಾಗಲೇ ನೋರ್ಕಾದಲ್ಲಿ ನೋಂದಾಯಿಸಿಕೊಂಡವರು ಕೂಡ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿ ಕೊಳ್ಳಬೇಕಾಗುತ್ತದೆ.

ಅರ್ಜಿದಾರನು ಸ್ವಂತ ಹಾರಾಟದ ವೆಚ್ಚವನ್ನು ಭರಿಸುವುದಾಗಿ ಮತ್ತು ಊರಿಗೆ ಮರಳಿದ ಬಳಿಕ, 14 ದಿನಗಳ ಕಾಲ ಕ್ವಾರಮಟೈನ್ ಅನ್ನು ಸ್ವಂತ ಖರ್ಚಿನಲ್ಲಿ ನಡೆಸಬಹುದು ಎಂಬ ಭರವಸೆಯನ್ನು ನೀಡಬೇಕಾಗುತ್ತದೆ. ನೋಂದಣಿ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.ಕೇಂದ್ರ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com