janadhvani

Kannada Online News Paper

ಮೂರನೇ ಲಾಕ್‌ಡೌನ್‌: ನೂತನ ಮಾರ್ಗಸೂಚಿ- ಮೇ.4ರಿಂದ ಅನ್ವಯ

ಬೆಂಗಳೂರು: ಕೊರೊನಾ ವೈರಸ್‌ ನಿಯಂತ್ರಿಸುವ ಭಾಗವಾಗಿ ಮೂರನೇ ಬಾರಿಗೆ ಲಾಕ್‌ಡೌನ್‌ ವಿಸ್ತರಣೆಯಾಗಿದ್ದು, ಶನಿವಾರ ರಾಜ್ಯ ಸರಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮೇ 17ರವರೆಗೆ ಲಾಕ್‌ಡೌನ್‌ ವಿಸ್ತರಿಸಿ ಕೇಂದ್ರ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟದ ಹಿರಿಯ ಸದಸ್ಯರು, ಉನ್ನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ.ಇದಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕೊರೊನಾ ನಿಯಂತ್ರಣ ಕ್ರಮಗಳ ಕುರಿತು ಚರ್ಚೆ ನಡೆಸಿದ್ದು ಹೊಸ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದ್ದಾರೆ.

ಹೊಸ ಮಾರ್ಗಸೂಚಿಗಳು ಮೇ 4ರಿಂದ ಮೇ 17ರವರೆಗೆ ಅನ್ವಯವಾಗಲಿವೆ.

  • ರಾಜ್ಯದ ಗ್ರೀನ್‌ ಝೋನ್‌ ಜಿಲ್ಲೆಗಳಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
  • ಮೇ.17ರ ವರೆಗೆ ಎಲ್ಲ ರೀತಿಯ ವಿಮಾನಯಾನ ಬಂದ್‌ ಮಾಡಲಾಗಿದೆ.
  • ರೆಡ್‌ ಝೋನ್‌ ಜಿಲ್ಲೆಗಳಲ್ಲಿ ಷಾಪಿಂಗ್‌ ಕಾಂಪ್ಲೆಕ್ಸ್‌ ಮಾಲ್‌ಗಳನ್ನು ತೆರೆಯುವಂತಿಲ್ಲ.
  • ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ತೆರೆಯುವಂತಿಲ್ಲ.
  • ಖಾಸಗಿ ಕಂಪನಿ, ಕಚೇರಿಗಳನ್ನು ಓಪನ್‌ ಮಾಡಬಹುದು.
  • ಅಗತ್ಯವಸ್ತುಗಳು ಎಂದಿನಂತೆ ಲಭ್ಯವಿರುತ್ತವೆ.
  • ಆರೆಂಜ್‌ ಮತ್ತು ಗ್ರೀನ್‌ ಝೋನ್‌ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಸಾರ್ವಜನಿಕ ವಾಹನಗಳಿಗೆ ಅವಕಾಶ ನೀಡಲಾಗಿಲ್ಲ.
  • ಗೂಡ್ಸ್‌ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
  • ಆರೋಗ್ಯದ ದೃಷ್ಟಿಯಿಂದ ಗರ್ಭಿಣಿ, ಮಕ್ಕಳು ಹಿರಿಯರು ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.
  • ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದರೆ ಮಾತ್ರವೇ ಆಸ್ಪತ್ರೆಗೆ ತೆರಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
  • ರಾಜ್ಯದ ಎಲ್ಲ ಕಡೆ ಆಸ್ಪತ್ರೆ ಗಳ ಒಪಿಡಿ ತೆರಯಲು ಸೂಚಿಸಲಾಗಿದೆ.
  • ರೆಡ್‌ ಝೋನ್‌ನಲ್ಲಿ ಯಾವುದೇ ವ್ಯಕ್ತಿ ಸಂಚರಿಸಬೇಕಾದರೆ ಆರೋಗ್ಯ ಸೇತು ಆಪ್‌ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
  • ರೆಡ್‌ ಝೋನ್‌ನಲ್ಲಿ ಸೆಲೂನ್‌, ಬ್ಯೂಟಿ ಪಾರ್ಲರ್‌ ತೆರೆಯಲು ಅವಕಾಶ ನೀಡಲಾಗಿಲ್ಲ.
  • ಆಟೋ ರಿಕ್ಷಾ, ಸೈಕಲ್‌ ರಿಕ್ಷಾ, ಟ್ಯಾಕ್ಸಿ, ಕ್ಯಾಬ್, ಅಂತರ ಜಿಲ್ಲಾ ಬಸ್ಸುಗಳ ಚಾಲನೆಗೂ ಅವಕಾಶ ನೀಡಲಾಗಿಲ್ಲ

error: Content is protected !! Not allowed copy content from janadhvani.com