ಕುವೈತ್ ನಗರ: ಕುವೈತ್ನಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗುತ್ತಿದ್ದು, ಸೋಂಕಿತರ ಸಂಖ್ಯೆಯು ಪ್ರತಿದಿನ ಹೆಚ್ಚುತ್ತಿದೆ. 215 ಹೊಸ ಪ್ರಕರಣಗಳ ದೃಢಪಡಿಸಲಾಗಿದೆ. ಈ ಪೈಕಿ 85 ಮಂದಿ ಭಾರತೀಯರಾಗಿದ್ದಾರೆ.ಇಂದು ನಾಲ್ವರು ಮೃತಪಟ್ಟಿದ್ದು, ಕುವೈತ್ನಲ್ಲಿ ಕೋವಿಡ್ ಮರಣ ಸಂಖ್ಯೆಯು 19ಕ್ಕೆ ಏರಿದೆ.
ಕುವೈತ್ನಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳನ್ನು ಶುಕ್ರವಾರ ದೃಢೀಕರಿಸಲಾಗಿದ್ದು, ಇದರೊಂದಿಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,892 ಕ್ಕೆ ಏರಿದೆ. ಇಂದು ದೃಢೀಕರಿಸಲಾದ ಪ್ರಕರಣಗಳ ಪೈಕಿ 85 ಮಂದಿ ಭಾರತೀಯರಾಗಿದ್ದಾರೆ. ಕುವೈತ್ನಲ್ಲಿ ಕೋವಿಡ್ ಪೀಡಿತರ ಪೈಕಿ ಒಟ್ಟು ಭಾರತೀಯರ ಸಂಖ್ಯೆಯು 1,395 ಅನ್ನು ದಾಟಿದೆ.
ಹೊಸ ಪ್ರಕರಣಗಳಲ್ಲಿ, ಭಾರತೀಯರು ಸೇರಿದಂತೆ ಸುಮಾರು 198 ಜನರು ವೈರಸ್ ಸೋಂಕಿಗೆ ಒಳಗಾದವರೊಂದಿಗೆ ಸಂಪರ್ಕ ಹೊಂದಿದವರಾಗಿದ್ದಾರೆ. ವಿವಿಧ ದೇಶಗಳ 10 ಮಂದಿ ಹೇಗೆ ಸೋಂಕಿಗೆ ಒಳಗಾದರು ಎಂಬುದು ಸ್ಪಷ್ಟವಾಗಿಲ್ಲ. ಯುಕೆಯಿಂದ ಮರಳಿದ ಏಳು ಕುವೈತಿಗಳು ಹೊಸದಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ.
ತೀವ್ರ ನಿಗಾ ಘಟಕದಲ್ಲಿದ್ದ ಬಂಗ್ಲಾದೇಶದ 55 ವರ್ಷದ ಪ್ರಜೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 115 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 656ಕ್ಕೆ ತಲುಪಿದೆ. ಪ್ರಸಕ್ತ 1,986 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 60 ಮಂದಿ ತೀವ್ರ ನಿಗಾದಲ್ಲಿದ್ದು,27 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Masha Allah