janadhvani

Kannada Online News Paper

ಬೆಂಗಳೂರು,ಏ.25: ಪ್ರಮುಖ ಹೋರಾಟಗಾರ, ಚಿಂತಕ, ನಮ್ಮ ಧ್ವನಿ ಸಂಸ್ಥಾಪಕ ಮಹೇಂದ್ರ ಕುಮಾರ್ ಕೊಪ್ಪ (47) ಇಂದು ಬೆಳಗ್ಗೆ ಹೃದಯಾಘಾತದಿಂದಾಗಿ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಬಜರಂಗದಳದ ಮಾ ರಾಜ್ಯ ಸಂಚಾಲಕರಾಗಿದ್ದ ಅವರು ಅದರಿಂದ ಹೊರಬಂದ ಬಳಿಕ ಸಾಮಾಜಿಕ, ಜಾಗೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು. ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಹೇಂದ್ರ ಕುಮಾರ್ ಬೆಂಗಳೂರು ವಾಸಿಯಾಗಿದ್ದರು.
ಸರ್ವಧರ್ಮ ಸೌಹಾರ್ದ, ಸಾಮಾರಸ್ಯದ ಕುರಿತು ಕಾಳಜಿಯಿಂದ ದುಡಿಯುತ್ತಿದ್ದ ಅವರು, ರಾಜ್ಯದಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದರು. ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.


“ನಮ್ಮ ಧ್ವನಿ” ಎಂಬ ಸಂಘಟನೆ ಸಂಸ್ಥಾಪಕರಾಗಿದ್ದ ಅವರು ನಮ್ಮ ಧ್ವನಿ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನಪ್ರಿಯರಾಗಿದ್ದರು.ಯಾವ ಹಿಂದು,ಯಾವ ಮುಸ್ಲಿಂ ,ಯಾವ ಕ್ರೈಸ್ತ ನಾವೆಲ್ಲರೂ ಭಾರತೀಯರೆಂದು ಸೌಹಾರ್ಧತೆ ಸಾರಿದ ಇವರು ಸಂಘಿಗಳ ಪಾಲಿನ ಸಿಂಹ ಸ್ವಪ್ನ ವಾಗಿದ್ದರು.

ಶಾಂತಿಪ್ರಿಯ, ಸೌಹಾರ್ದಪರ, ಪ್ರಗತಿಪರ ನಿಲುವುಗಳ ಮಹೇಂದ್ರ ಕುಮಾರ್ ಅವರ ನಿಧನ ರಾಜ್ಯಕ್ಕೆ ಬಹು ದೊಡ್ಡ ಆಘಾತವಾಗಿದೆ. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
error: Content is protected !! Not allowed copy content from janadhvani.com