ನೆಲ್ಯಾಡಿ: ದೇಶಾದ್ಯಂತ ಆವರಿಸಿರುವ ಕೋವಿಡ್-19 ನಿಂದಾದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ರುವ ಕೂಲಿ ಕಾರ್ಮಿಕರು, ಅಂತರ್ ರಾಜ್ಯ ವಲಸಿಗರು, ಮಧ್ಯಮ ವರ್ಗದ ಜನರು ಸೇರಿದಂತೆ ಬಡ ಜನರಿಗೆ ಅವಶ್ಯಕತೆಯಿರುವ ಆಹಾರ ಸಾಮಾಗ್ರಿಗಳನ್ನು ಎಸ್ಸೆಸ್ಸೆಫ್ ನೆಲ್ಯಾಡಿ ಶಾಖೆ ವತಿಯಿಂದ ವಿತರಿಸಲಾಯಿತು.
ಹಲವಾರು ಜೀವ ಕಾರುಣ್ಯ ಸೇವೆ ಸಲ್ಲಿಸುತ್ತಿರುವ ಎಸ್ಸೆಸ್ಸೆಫ್ ನೆಲ್ಯಾಡಿ ಯುನಿಟ್ ಈ ಭಾರಿ ತುರ್ತು ಸೇವೆ ಯೊಂದಿಗೆ ಎಸ್ ಎಸ್ ಎಫ್ ನೆಲ್ಯಾಡಿ ಶಾಖೆಯೂ ಸಾಂತ್ವನ ವಿಭಾಗದಿಂದ ನೆಲ್ಯಾಡಿ ಹಾಗೂ ಪರಿಸರದ ಜಾತಿ ಮತ ಬೇಧವಿಲ್ಲದೆ ಬಡ ಹಾಗೂ ಮಧ್ಯಮ ವರ್ಗದ ಹಲವಾರು ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೆಲ್ಯಾಡಿ ಎಸ್ಸೆಸ್ಸೆಫ್ ನೆಲ್ಯಾಡಿ ಶಾಖೆ ಹಾಗೂ ಸೆಕ್ಟರ್ ಅಧ್ಯಕ್ಷರಾದ ಶಾಹುಲ್ ಹಮೀದ್ ಸಖಾಫಿ, ಸೆಕ್ಟರ್ ಪ್ರ,ಕಾರ್ಯದರ್ಶಿ ಇರ್ಷಾದ್ ಕೆ.ಇ, ಅಬ್ದುಲ್ಲಾ ಎನ್ ಎಸ್, ರಫೀಕ್ ಎನ್ ಎಸ್, ಅನ್ವರ್ ಸಿ.ಎಂ, ಬಶೀರ್ ಸೀಗಲ್, ಆಸಿಫ್ ಶಾಂತಿಬೆಟ್ಟು, ಫಾರೂಕ್ ಎನ್ ಕೆ, ಮುಸ್ತಫಾ ಹಿದಾಯತ್ ನಗರ ಮುಂತಾದವರು ಉಪಸ್ಥಿತರಿದ್ದರು.
ಪೇಟೆಗೆ ಬರಳು ಅಸಾಧ್ಯವಾದ ಕುಟುಂಬಗಳಿಗೆ ಉಚಿತ ಡೆಲಿವರಿ, ಆಸ್ಪತ್ರೆಯಿಂದ ಮನೆಗಳಿಗೆ ತರಳುವ ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ, ಬಡ ಜನರಿಗೆ ಉಚಿತ ಮೆಡಿಸಿನ್ ವಿತರಣೆ ಸೇರಿದಂತೆ ಹಲವಾರು ಸಾಂತ್ವನ ಸೇವೆಗಳನ್ನು ಎಸ್ಸೆಸ್ಸೆಫ್ ನೆಲ್ಯಾಡಿ ತುರ್ತು ಸೇವಾ ವಿಭಾಗವು ಮಾಡುತ್ತಾ ಬರುತಿದ್ದು, ಈ ಕಾರ್ಯಕ್ಕೆ ಸಾರ್ವಜನಿರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.