ದಮಾಮ್: ಸೌದಿಯಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಆರೋಗ್ಯ ಸುರಕ್ಷತಾ ಕ್ರಮದ ಭಾಗವಾಗಿ ಈ ವರ್ಷದ ರಮಳಾನ್ ನಲ್ಲಿ ತರಾವೀಹ್ ಮತ್ತು ಈದ್ ಅಲ್-ಫಿತರ್ ನಮಾಝ್‌ಗಳನ್ನು ಮನೆಯಲ್ಲೇ ನಿರ್ವಹಿಸಬೇಕು ಎಂದು ಸೌದಿ ಗ್ರ್ಯಾಂಡ್ ಮುಫ್ತಿ ಶೈಖ್ ಅಬ್ದುಲ್ ಅಝೀಝ್ ಆಲು-ಶೈಖ್ ಹೇಳಿದ್ದಾರೆ.
ಪವಿತ್ರ ರಮಝಾನ್ ಇನ್ನು ಕೆಲವೇ ದಿನಗಳ ಒಳಗೆ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಈ ವಿಷಯ ಸಂಬಂಧಿಸಿ ಆವರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಸಕ್ತ ಪರಿಸ್ಥಿತಿ ಮುಂದುವರಿದರೆ ಮಸೀದಿಗಳು ಮತ್ತು ಈದ್ಗಾಗಳಲ್ಲಿ ಈದ್ ನಮಾಝ್ ನಿರ್ವಹಣೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಖುತ್ಬಾ (ಪ್ರಭಾಷಣ) ಇಲ್ಲದೆ ಮನೆಯಲ್ಲಿಯೇ ಈದ್ ನಮಾಝ್ ನಿರ್ವಹಿಸಬೇಕು ಎಂದು ಅವರು ಹೇಳಿದರು.
“ತರಾವೀಹ್ ನಮಾಝ್ ಕೇವಲ ಎರಡು ಹರಮ್ ಮಸೀದಿಗಳಲ್ಲಿ ಮಾತ್ರ ನಿರ್ವಹಿಸಲ್ಪಡಲಿದೆ. ಉಳಿದ ಮಸೀದಿಗಳಲ್ಲಿ ತರಾವೀಹ್ ಜಮಾಅತ್ ಇರುವುದಿಲ್ಲ” ಎಂದು ಇಸ್ಲಾಮಿಕ್ ಧಾರ್ಮಿಕ ಖಾತೆಯ ಸಚಿವ ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಅಝೀಝ್ ಅಲ್-ಶೈಖ್ ಮಾಹಿತಿ ನೀಡಿದ್ದರು.
ಎರಡೂ ಹರಮ್ ಮಸೀದಿಗಳಿಗೆ ಪ್ರವೇಶಿಸಲು ಹೊರಗಿನವರಿಗೆ ಯಾವುದೇ ಅವಕಾಶವಿಲ್ಲ. ಭದ್ರತಾ ಸಿಬ್ಬಂದಿ, ಸಚಿವಾಲಯದ ಕೆಲಸಗಾರರು ಮತ್ತು ಹರಮ್‌ನ ಇತರ ಸೇವಕರಿಗೆ ಮಾತ್ರ ಪ್ರವೇಶ ಲಭ್ಯವಿದೆ.
ಪ್ರಸಕ್ತ, ದೇಶದ ಇತರ ಮಸೀದಿಗಳಲ್ಲಿ ಕೇವಲ ಆಝಾನ್ ಮಾತ್ರ ಮೊಳಗುತ್ತಿದೆ. ಜಮಾಅತ್ ನಮಾಝನ್ನು ನಿಲ್ಲಿಸಲಾಗಿದೆ. ಕೋವಿಡ್ 19 ದೇಶದಿಂದ ಸಂಪೂರ್ಣವಾಗಿ ನಿರ್ನಾಮಗೊಂಡರೆ ಮಾತ್ರ ಮಸೀದಿಗಳಲ್ಲಿ ಜಮಾಅತನ್ನು ಪುನರಾರಂಭಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ