janadhvani

Kannada Online News Paper

ಲಾಕ್ ಡೌನ್: ತೆಕ್ಕಾರು ಜುಮ್ಮಾ ಮಸ್ಜಿದ್ ಸಮಿತಿಯಿಂದ ಐತಿಹಾಸಿಕ ತೀರ್ಮಾನ

ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ನಿಂದಾಗಿ ಜನ -ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ಥ ಗೊಳಿಸಿದ್ದು.

ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೆಲ್ಲದರ ಮಧ್ಯೆ ಬದ್ರಿಯಾ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ, ತೆಕ್ಕಾರು ಜಮಾಅತಿಗೊಳಪಟ್ಟ ಜನರಿಗೆ ಐತಿಹಾಸಿಕ ತೀರ್ಮಾನ ಹೊರಡಿಸಿದ್ದು, ಈ ತೀರ್ಮಾನವು ಇತರ ಎಲ್ಲಾ ಜಮಾಅತ್ ಗಳ ಕಣ್ಣು ತೆರೆಸಿವೆ. ಮಾದರಿ ಜಮಾಅತ್ ಎಂಬ ಹೆಗ್ಗಳಿಕೆಗೆ ಜುಮ್ಮಾ ಮಸ್ಜಿದ್ ತೆಕ್ಕಾರು ಪಾತ್ರವಾಗಿದೆ.

ಅಷ್ಟಕ್ಕೂ ಜಮಾಅತ್ ಸಮಿತಿ ಹೊರಡಿಸಿರುವ ಐತಿಹಾಸಿಕ ತೀರ್ಮಾನಗಳೇನು? .

  • ಜಮಾಅತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಉಸ್ತಾದರುಗಳ ವೇತನವನ್ನು ಯಥಾ-ಸ್ಥಿತಿ ನೀಡುವುದು.
  • ಏಪ್ರಿಲ್,ಮೇ, ಜೂನ್ 3 ತಿಂಗಳ ಮಾಸಿಕ ವಂತಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ.
  • ಈ 3 ತಿಂಗಳ ವಂತಿಗೆಯನ್ನು ತೆಕ್ಕಾರು ಜಮಾಅತ್ ಗೊಳಪಟ್ಟ ಯಾರು ನೀಡಬೇಕಿಲ್ಲ ಎಂದು ಜಮಾಅತ್ ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ T,H ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

    ತೆಕ್ಕಾರು ಜಮಾಅತ್ ವ್ಯಾಪ್ತಿಯಲ್ಲಿ ಇದೀಗಾಗಲೇ ಸಂಕಷ್ಟಕ್ಕೀಡಾದ ಹಲವಾರು ಮನೆಗಳಿಗೆ ಜಮಾಅತ್ ವ್ಯಾಪ್ತಿಯ ಸಂಘ ಸಂಸ್ಥೆಗಳು ಪರಿಹಾರ ಕಿಟ್ ಗಳನ್ನು ವಿತರಿಸಿದ್ದಾರೆ.
    ತಖ್ವೀಯತುಲ್ ಇಸ್ಲಾಂ ಆಡಳಿತ ಸಮಿತಿ ತೆಕ್ಕಾರು ಜಮಾಅತ್ ಸಮಿತಿ ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನವನ್ನು ಜಮಾಅತ್ ಸದಸ್ಯರು ಬಹಳ ಸಂತೋಷದಿಂದ ಸ್ವಾಗತಿಸಿದ್ದಾರೆ.

    ವರದಿ;-ಕೆ,ಪಿ ಬಾತಿಶ್ ತೆಕ್ಕಾರು

    error: Content is protected !! Not allowed copy content from janadhvani.com