ಕುವೈಟ್ ಸಿಟಿ: ಕೋವಿಡ್ 19 ರ ಪರಿಣಾಮವಾಗಿ ವಿದೇಶಗಳಲ್ಲಿ ಯಾತನೆ ಅನುಭವಿಸುವ ಭಾರತೀಯ ವಲಸಿಗರನ್ನು ವಾಪಸ್ ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ಪ್ರವಾಸಿ ಲೀಗಲ್ ಸೆಲ್ನ ಜಾಗತಿಕ ಅಧ್ಯಕ್ಷ ಅಡ್ವಕೆಟ್.ಜೋಸ್ ಅಬ್ರಹಾಂ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಯಾತನೆ ಅನುಭವಿಸುತ್ತಿರುವ ವಿದೇಶಿ ಭಾರತೀಯರನ್ನು ವಾಪಸು ಕರೆತರುವುದರ ಜೊತೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಆನ್ಲೈನ್ನಲ್ಲಿ ವೈದ್ಯರ ಪರಿಶೋಧನೆ ಮತ್ತು ಸಮಾಲೋಚನೆಗಾಗಿ ವೆಬ್ ಪೋರ್ಟಲ್ ಸಜ್ಜುಗೊಳಿಸುವ ತುರ್ತು ಅಗತ್ಯವನ್ನು ಸಹ ಅರ್ಜಿಯಲ್ಲಿ ಕೋರಲಾಗಿದೆ.
ಭಾರತೀಯ ರಾಯಭಾರಿ, ಹೈಕಮೀಷನ್ ಸಾರಥ್ಯದಲ್ಲಿ ರೋಗ ಲಕ್ಷಣವಿರುವ ವಲಸಿಗ ಭಾರತೀಯರನ್ನು ಪರಿಶೋಧನೆಗೆ ಒಳಪಡಿಸಬೇಕು. ಆಹಾರ, ಔಷಧ, ನೀರಿನ ಸೌಲಭ್ಯಗಳನ್ನು ಒದಗಿಸಬೇಕು. ಅತ್ಯಧಿಕ ಸಂಖ್ಯೆಯಲ್ಲಿರುವ ಕಾರ್ಮಿಕರನ್ನು ಸುರಕ್ಷಿತ ಶಿಬಿರಗಳಿಗೆ ಸ್ಥಳಾಂತರಿಸಬೇಕು. ರೋಗದಿಂದ ಬಳಲುತ್ತಿರುವ ವಲಸಿಗ ಭಾರತೀಯರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಪ್ರವಾಸಿ ಲೀಗಲ್ ಸೆಲ್ ಇದೇ ಕೋರಿಕೆಯೊಂದಿಗೆ, ಮುಖ್ಯಮಂತ್ರಿ ಇತರ ಸಂಸದರು ಪ್ರಧಾನಿ ಮತ್ತು ವಿದೇಶಾಂಗ ಸಚಿವರಿಗೆ ಪತ್ರಗಳನ್ನು ಕಳುಹಿಸಿದ್ದು, ಆದರೆ ಕೇಂದ್ರ ಸರಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿ ಲೀಗಲ್ ಸೆಲ್ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಅನುಕೂಲಕರ ನ್ಯಾಯ ಲಭಿಸುವ ಬರವಸೆ ಇದೆ ಎಂದು ಕುವೈತ್ ಚಾಪ್ಟರ್ ಅಧ್ಯಕ್ಷ ಬಾಬು ಫ್ರಾನ್ಸಿಸ್, ಪ್ರಧಾನ ಕಾರ್ಯದರ್ಶಿ ಬಿಜು ಸ್ಟೀಫನ್ ಪತ್ರಿಕಾ ಪ್ರಕಟಮೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು