ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರವಾಸಿ ವೀಸಾಗಳ ನವೀಕರಣ ಕ್ರಮವು ಜಾರಿಗೆ ಬಂದಿದೆ. ಆರೋಗ್ಯ ವಿಮೆ ಮತ್ತು ವೀಸಾ ಶುಲ್ಕವನ್ನು ಪಾವತಿಸಿದವರು ಅಬ್ಶೀರ್ ಪೋರ್ಟಲ್ ಮೂಲಕ ನವೀಕರಿಸಬಹುದು. ಈ ಕ್ರಮವು ವಿದೇಶಿಯರಿಗೆ ವರದಾನವಾಗಿದೆ.
ಒಂದು ವರ್ಷದ ಮಲ್ಟಿಪಲ್ ವೀಸಾ ಹೊಂದಿರುವವರು ದೇಶವನ್ನು ತೊರೆಯದೆ ವೀಸಾ ನವೀಕರಣ ಮಾಡುವ ಕಾರ್ಯ ವಿಧಾನಗಳು ಈಗ ಜಾರಿಯಲ್ಲಿವೆ. ಪ್ರಸಕ್ತ ನಿಯಮಗಳ ಪ್ರಕಾರ, 6 ರಿಂದ ಒಂಬತ್ತು ತಿಂಗಳವರೆಗೆ ವೀಸಾ ನವೀಕರಣಕ್ಕೆ ದೇಶ ತೊರೆದು ಮರಳಿ ಬರುವುದು ಕಡ್ಡಾಯವಾಗಿತ್ತು. ಆದರೆ ಕೋವಿಡ್ 19 ಕಾಯಿಲೆಯ ಹಿನ್ನೆಲೆಯಲ್ಲಿ, ಅನೇಕ ವಿದೇಶಿಯರು ವೀಸಾವನ್ನು ನವೀಕರಿಸಲು ಹೆಣಗಾಡಿದ್ದಾರೆ. ಕಾರಣ ಅಲ್ಲಿ ಅಂತರ್‌ರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ದೇಶದ ಗಡಿಗಳನ್ನು ಬಂದ್ ಮಾಡಲಾಗಿದೆ ಮತ್ತು ಪ್ರಯಾಣ ನಿಷೇಧವನ್ನು ವಿಧಿಸಲಾಗಿದೆ.
ಈ ಸನ್ನಿವೇಶದಲ್ಲಿ ಸೌದಿ ಪಾಸ್‌ಪೋರ್ಟ್ ಇಲಾಖೆಯು ಅಬ್ಷೀರ್ ಆನ್‌ಲೈನ್ ಪೋರ್ಟಲ್ ಮೂಲಕ ಬಹು ಸಂದರ್ಶಕರ ವೀಸಾಗಳನ್ನು ನವೀಕರಿಸಲು ಅನುಮೋದನೆ ನೀಡಿದೆ. ಆರೋಗ್ಯ ವಿಮೆ ಆನ್‌ಲೈನ್ ಮೂಲಕ ನವೀಕರಿಸಿದ ನಂತರ, ಮೂರು ತಿಂಗಳ ವೀಸಾ ಶುಲ್ಕವಾಗಿ 100 ರಿಯಾಲ್ ಪಾವತಿಸಬೇಕು. ನಂತರ ಅಬ್ಶೀರ್ ಮೂಲಕ ಮೂರು ತಿಂಗಳ ಕಾಲ ವೀಸಾ ನವೀಕರಣ ಮಾಡಬಹುದಾಗಿದೆ. ವೀಸಾ ಅವಧಿ ಮುಗಿಯುವ ಏಳು ದಿನಗಳ ಮೊದಲು ಮತ್ತು ಮುಕ್ತಾಯ ದಿನಾಂಕ ಬಳಿಕ ಮೂರು ದಿನಗಳವರೆಗೆ ವೀಸಾ ನವೀಕರಣಗಳನ್ನು ಅನುಮತಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ