ಬೆಂಗಳೂರು:ವಿಶ್ವದಾದ್ಯಂತ ಕೋವಿಡ್ ಭೀತಿಯಲ್ಲಿ ಜನತೆ ತತ್ತರಿಸಿರುವಾಗ ಕನ್ನಡದ ಪ್ರಮುಖ ಪತ್ರಿಕೆಯೊಂದು ಕೋರೋನ ಸೋಂಕಿಗೂ ಮುಸ್ಲಿಮ್ ಸಮುದಾಯಕ್ಕೂ ತಳುಕುಹಾಕಿ ವರದಿ ಮಾಡಿರುವುದನ್ನು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಖಂಡಿಸಿದೆ.
ರಾಜ್ಯದ ಎಲ್ಲಾ ಪ್ರಮುಖ ವಿದ್ವಾಂಸರು ಶುಕ್ರವಾರದ ಜುಮಾ ನಮಾಝನ್ನು ಮಾಡದಂತೆ ಸಮುದಾಯಕ್ಕೆ ಕರೆ ನೀಡಿದ್ದಾರೆ. ಆದರೂ ಪತ್ರಿಕೆಯು ಪೂರ್ವಾಗ್ರಹ ವರದಿ ಮಾಡಿರುವುದು ಆತಂತಕಕಾರಿಯಾಗಿದೆ. ಇಂತಹ ಮಾರಕ ವಿಪತ್ತುಗಳ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಸಹಕರಿಸಬೇಕಾದ ಸಂದರ್ಭದಲ್ಲೂ ಮಾನವೀಯತೆ ಮರೆತು ಕೋಮಪ್ರಚೋದಿತ ವರದಿ ಮಾಡುವ ಪತ್ರಕರ್ತರು ಕನ್ನಡ ಪತ್ರಿಕೋದ್ಯಮಕ್ಕೇ ಕಳಂಕರಾಗಿದ್ದಾರೆ.
ಕನ್ನಡ ಪತ್ರಿಕೋದ್ಯಮವು ಇದನ್ನು ಖಂಡಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಅಲ್ ಮದನಿ ಆಗ್ರಹಿಸಿದ್ದಾರೆ.ಕೋವಿಡ್ ಮೊದಲು ಕಂಡು ಬಂದ ಚೀನಾದಲ್ಲಾಗಲೀ ನಂತರ ವ್ಯಾಪಕವಾಗಿ ಹರಡಿರುವ ಇಟಲಿ, ಸ್ಪೈನ್, ಅಮೆರಿಕ ಗಳಲ್ಲಿ ಯಾವ ಸಮುದಾಯದ ಪಾತ್ರ ಇದೆ ಎಂಬ ಬಗ್ಗೆ ಯಾರೂ ವಿಶ್ಲೇಷಣೆ ಮಾಡಿಲ್ಲ. ಅಂತಹದ್ದೊಂದು ಚರ್ಚೆಯೇ ಅಪ್ರಸ್ತುತ ಹಾಗೂ ಅಮಾನವೀಯ ಎಂದು ಅವರು ಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ