ರಿಗೆ..
1 ವಖಫ್ ಇಲಾಖೆ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ
2
ವಕಫ್ ಅಧಿಕಾರಿಗಳು ದ.ಕ ಜಿಲ್ಲೆ
ರಿಂದ
ಹಾಫಿಳ್ ಯಾಕೂಬ್ ಸಅದಿ ನಾವೂರು
ಪ್ರಧಾನ ಕಾರ್ಯದರ್ಶಿ ಜಂಇಯ್ಯತುಲ್ ಉಲಮಾ ಮಂಗಳೂರು ಝೋನ್
ವಿಷಯ : ಕೋವಿಡ್ 19: ಪೇಶ್ ಇಮಾಮ್ ಮುಅದ್ಸಿನ್ ಗಳ ಮೂರು ತಿಂಗಳ ಗೌರವಧನ ಈಗಲೇ ಬಿಡುಗಡೆ ಮಾಡುವಂತೆ
ಮಾನ್ಯರೇ…
ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ ಇಮಾಮ್ ಮತ್ತು ಮುಅದ್ಸಿನ್ ಗಳಿಗೆ ವಕಫ್ ಇಲಾಖೆಯಿಂದ ಮಾಸಿಕ ಗೌರವಧನವನ್ನು ನೀಡಲಾಗುತ್ತಿದೆ . ಇತ್ತೀಚೆಗೆ ವಕಫ್ ಇಲಾಖೆಯ ನಿಯಮದಂತೆ ಪ್ರತೀ ತಿಂಗಳ 25ನೇ ತಾರೀಕಿಗೆ ಇಮಾಮ್ ಮತ್ತು ಮುಅದ್ಸಿನ್ ಗಳ ಸೇವೆಯ ಹಾಜರಾತಿ ಸಲ್ಲಿಸಲು ಕಡ್ಡಾಯವಾಗಿತ್ತು.
ಆದರೆ ಮಾರ್ಚ್ ತಿಂಗಳ 22ರ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಾಕ್ ಡೌನ್ ಇರುವುದರಿಂದ ಹೆಚ್ಚಿನ ಮಸೀದಿ ಗಳ ಇಮಾಮ್ ಮತ್ತು ಮುಅದ್ಸಿನ್ ಗಳನ್ನು ಮನೆಗೆ ಕಳುಹಿಸಲಾಗಿದ್ದಲ್ಲದೆ ಹಾಜರಾತಿಯನ್ನು ಸಲ್ಲಿಸಲು ಆಗಲಿಲ್ಲ. ಇದರಿಂದ ಮಾರ್ಚ್ ತಿಂಗಳ ಗೌರವಧನ ಸಿಗಬಹುದೇನೋ ಎಂಬ ಸಂದೇಹ ಹುಟ್ಟಿದೆ.
ಮಸೀದಿ ಸೇವಕರು ಕೋವಿಡ್ 19 ಕಾರಣದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಲ್ಲದೆ ಹಿಂತಿರುಗಿ ಮಸೀದಿ ಕೆಲಸಕ್ಕೂ ಬರಲು ಸಾಧ್ಯವಾಗದಿರುವುದರಿಂದ ನಿತ್ಯ ಜೀವನಕ್ಕೆ ಕಷ್ಟ ಪಡುವಂತಾಗಿದೆ.
ಅಲ್ಲದೇ ಎಪ್ರಿಲ್ ಕೊನೆಯ ವಾರದಲ್ಲಿ ರಂಜಾನ್ ಹಬ್ಬವು ಪ್ರಾರಂಭವಾಗಲಿದೆ. ಇವೆಲ್ಲವನ್ನೂ ಮನಗಂಡು ಮಾರ್ಚ್, ಎಪ್ರಿಲ್, ಮೇ ತಿಂಗಳುಗಳ ಗೌರವಧನವನ್ನು ಈಗಲೇ ಬಿಡುಗಡೆ ಮಾಡಿ ಸಹಕರಿಸುವಿರಾಗಿಯು ಅದೇ ರೀತಿ ಮದ್ರಸಗಳಲ್ಲಿ ಕಲಿಸುವ ಮುಅಲ್ಲಿಮರ ನಿತ್ಯ ಜೀವನಕ್ಕೂ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿಯು ಈ ಮೂಲಕ ವಿನಂತಿಸುತ್ತೇನೆ.
ಉಲ್ಲೇಖ: ಲಾಕ್ ಡೌನ್ ಆಗಿರುವ ಕಾರಣದಿಂದ ಇತರ ರೀತಿಯಲ್ಲಿ ಇಲಾಖೆಯ ಗಮನಕ್ಕೆ ತರಲು ಸಾಧ್ಯವಾಗಿಲ್ಲ.
25/3/2020
Mangalore