janadhvani

Kannada Online News Paper

ಎಸ್ ಎಸ್ ಎಫ್ ಮುರ ಶಾಖೆ ವತಿಯಿಂದ ಬ್ರಹತ್ ಅಜ್ಮೀರ್ ಮೌಲಿದ್ ಹಾಗೂ ಖವ್ವಾಲಿ ಸ್ಪರ್ಧೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇಳಂತಿಲ ಮುರ ಶಾಖೆ ವತಿಯಿಂದ ಖವ್ವಾಲಿ ಸ್ಪರ್ಧೆ ಹಾಗೂ ಅಜ್ಮೀರ್ ಮೌಲಿದ್ ಮತ್ತು ಈ ಕೆ ಹಸನ್ ಮುಸ್ಲಿಯರ್ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾರ್ಚ್ 13 ಮತ್ತು 14 ರಂದು ಮುರ ಮಸೀದಿಯ ವಠಾರದಲ್ಲಿ ನಡೆಯಲಿದೆ

ಕಾರ್ಯಕ್ರಮದ ಮೊದಲ ದಿನವಾದ ಮಾರ್ಚ್ 13 ರಂದು ಮಗ್ರೀಬ್ ನಮಾಝಿನ ಬಳಿಕ ಖವ್ವಾಲಿ ಸ್ಪರ್ಧೆ ನಡೆಯಲಿದೆ .

ಪ್ರಸ್ತುತ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಮೀರ್ ಮೌಲಿದ್ ಸ್ವಾಗತ ಸಮೀತಿ ಚೇರ್ಮನ್ ಅಲ್ ಹಾಜಿ ಇಸ್ಮಾಯಿಲ್ ಜೋಗಿಬೆಟ್ಟು ವಹಿಸಲಿದ್ದಾರೆ ದುವಾ ನೇತೃತ್ವವನ್ನು ಸ್ಥಳಿಯ ಖತೀಬರಾದ ಸಿ ಎಂ ಅಬೂಬಕ್ಕರ್ ಲತ್ವೀಫಿ ಎಣ್ಮೂರು ( ಖತೀಬರು ಜೆ ಎಂ ಮುರ )
ಎಸ್ ಎಸ್ ಎಫ್ ಮುರ ಶಾಖೆ ಅಧ್ಯಕ್ಷರಾದ ನೌಷಾದ್ ಸಖಾಫಿ ಸ್ವಾಗತಿಸುವಾಗ
ಮೂರುಗೋಳಿ ಖತೀಬರಾದ ಅತಾವುಲ್ಲಾ ಸಖಾಫಿ ಕುಪ್ಪೆಟ್ಟಿ ಮುಖ್ಯಪ್ರಭಾಷಣಗೈಯಲಿದ್ದಾರೆ .

ಸಮಾರೋಪ ದಿನವಾದ ಮಾರ್ಚ್ 14 ರಂದು ಶನಿವಾರ ಅಸರ್ ನಮಾಝಿನ ಬಳಿಕ ಖತಮುಲ್ ಖುರ್ಅನ್ ಅಜ್ಮೀರ್ ಮೌಲಿದ್ ಗುರುವಾನೆಕೆರೆ ಮುದರ್ರೀಸ್( SJU ಬೆಳ್ತಂಗಡಿ ಪ್ರ ಕಾರ್ಯದರ್ಶಿ ) ಆದಂ ಅಹ್ಸನಿ ತುರ್ಕಳಿಕೆ ನೇತೃತ್ವ ವಹಿಸಲಿದ್ದಾರೆ
ಪದ್ಮುಂಜ ಖತೀಬರಾದ ಮಸೂದ್ ಸ‌ಅದಿ ಹಾಗೂ ಅಹ್ಮದ್ ಅಲಿ ಸ‌ಅದಿ ಮುರ ಮೌಲಿದ್ ಅಲಾಪಣ ನೇತ್ರತ್ವ ವಹಿಸಲಿದ್ದಾರೆ .

ಮಗ್ರೀಬ್ ನಮಾಜಿನ ಬಳಿಕ ಸಯ್ಯದ್ ಮಶ್ಹೂರ್ ಮುಲ್ಲಕೋಯ ತಙಳ್ ಸಮಾರಂಭಕ್ಕೆ ನೇತ್ರತ್ವ ವಹಿಸಲಿದ್ದಾರೆ .

ಸುನ್ನಿ ಜಂಯುತ್ತಲ್ ಉಲಾಮ ಕೆಂದ್ರ ಮುಶವಾರ ಸಮೀತಿ ತಾಜುಶ್ಶಾರಿಯ ಅಲಿ ಕುಂಞಿ ಉಸ್ತಾದ್ ಗೌರವರ್ಪಣೆ ಕಾರ್ಯಕ್ರಮ ನಡೆಯಲಿದೆ.

ಹಂಝ ಮಿಸ್ಬಾಹಿ ಒಟೆಪದವು ಮುಖ್ಯ ಪ್ರಭಾಷಣಗೈಯಲಿದ್ದಾರೆ
ಹಾಗೂ ಉಲಾಮಗಳು ಮತ್ತು ಸಾಮಾಜಿಕ ನಾಯಕರು ಈ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ.
ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com