ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ whatsapp ತನ್ನ ಬಹುನಿರೀಕ್ಷಿತ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದೆ. ಬುಧುವಾರ ತನ್ನ ಈ ಅದ್ಭುತ ವೈಶಿಷ್ಟ್ಯವನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಆದರೆ, ಎಲ್ಲ ಬಳಕೆದಾರರಿಗೆ ಈ ವೈಶಿಷ್ಟ್ಯ ಸಿಗಲು ಸ್ವಲ್ಪ ಕಾಲಾವಕಾಶ ಬೇಕಾಗಲಿದೆ.
ತನ್ನ ಈ ನೂತನ ವೈಶಿಷ್ಟ್ಯ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ವೈಶಿಷ್ಟ್ಯವನ್ನು ಜಾರಿಗೊಳಿಸಿರುವ ಕಂಪನಿ, “ಈ ವೈಶಿಷ್ಟ್ಯ ಬಳಕೆದಾರರಿಗೆ ನೂತನ ಅನುಭವ ನೀಡಲಿದ್ದು, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ” ಎಂದು ಹೇಳಿದೆ. ಆದರೆ, ತನ್ನ ಡಾರ್ಕ್ ಮೋಡ್ ನಲ್ಲಿ ಕಂಪನಿ ಸಂಪೂರ್ಣ ಕಪ್ಪು ಬಣ್ಣವನ್ನು ಬ್ಯಾಕ್ ಗ್ರೌಂಡ್ ಆಗಿ ಬಳಸಿಲ್ಲ.
ಡಾರ್ಕ್ ಮೋಡ್ ಜೊತೆಗೆ ಬಳಕೆದಾರರಿಗೆ ಗ್ರೇ ಹಾಗೂ ಆಫ್ ವೈಟ್ ಬಣ್ಣಗಳ ವಿಕಲ್ಪಗಳನ್ನೂ ಸಹ WhatsApp ಪರಿಚಯಿಸಿದೆ. ಈ ಎರಡೂ ಬಣ್ಣಗಳೂ ಕೂಡ ಸ್ಕ್ರೀನ್ ನ ಬ್ರೈಟ್ ನೆಸ್ ಪ್ರಭಾವವನ್ನು ಕಡಿಮೆಗೊಳಿಸುತ್ತವೆ. ಈ ವೈಶಿಷ್ಟ್ಯದ ಮಾಹಿತಿ ನೀಡಲು ಕಂಪನಿ ಒಂದು ಶಾರ್ಟ್ ಫಿಲ್ಮ್ ಅನ್ನು ಕೂಡ ಸಿದ್ಧಪಡಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಹೀಗೆ ಡಾರ್ಕ್ ಮೋಡ್ ಆಕ್ಟಿವ್ ಮಾಡಿ
ಡಾರ್ಕ್ ಮೋಡ್ ಕುರಿತು ಮಾಹಿತಿ ನೀಡಲು ಸಿದ್ಧಪಡಿಸಲಾಗಿರುವ ಶಾರ್ಟ್ ಫಿಲ್ಮ್ ಗೆ ವಾಟ್ಸ್ ಆಪ್ ‘ಹಲೋ ಡಾರ್ಕ್ ನೆಸ್’ ಎಂಬ ಹೆಸರನ್ನು ಇಟ್ಟಿದೆ. ಡಾರ್ಕ್ ಮೋಡ್ ನ ಹೊರತಾಗಿಯೂ ಕೂಡ ವಾಟ್ಸ್ ಆಪ್ ತನ್ನ ಡಿಸೈನ್ ನಲ್ಲಿಯೂ ಕೂಡ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ. ಅಂಡ್ರಾಯಿಡ್ 10 ಹಾಗೂ iOS 13 ಬಳಸುವ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಈ ವೈಶಿಷ್ಟ್ಯವನ್ನು ಅಳವಡಿಸಿಕೊಳ್ಳಬಹುದಾಗಿದೆ.
ಇನ್ನೊಂದೆಡೆ ಅಂಡ್ರಾಯಿಡ್ 9 ಮತ್ತು ಅದಕ್ಕಿಂತ ಕೆಳಗಿನ ಆವೃತ್ತಿಯ ಸ್ಮಾರ್ಟ್ ಫೋನ್ ಬಳಸುವ ಬಳಕೆದಾರರು whatsapp ನ ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಿ ಈ ವೈಶಿಷ್ಟ್ಯವನ್ನು ಅಳವಡಿಸಬಹುದಾಗಿದೆ. ವಾಟ್ಸ್ ಆಪ್ ನ ಸೆಟ್ಟಿಂಗ್ ವಿಭಾಗಕ್ಕೆ ಮೊದಲು ಭೇಟಿ ನೀಡಿ, ಮೊದಲು ಥೀಮ್ ಹಾಗೂ ನಂತರ ಚಾಟ್ಸ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ ನಂತರ ಡಾರ್ಕ್ ಮೋಡ್ ಅನ್ನು ಆಯ್ಕೆ ಮಾಡಬಹುದಾಗಿದೆ.