janadhvani

Kannada Online News Paper

ಮಾರ್ಚ್ 6:ಮರಿಕ್ಕಳದಲ್ಲಿ ಶಾದುಲೀ ರಾತೀಬ್ ಮಜ್ಸಿಸ್

ಮೊಂಟೆಪದವು:ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ವತಿಯಿಂದ ಪ್ರತೀ 6 ತಿಂಗಳೊಮ್ಮೆ ನಡೆಸಿಕೊಂಡು ಬರುತ್ತಿರುವ ಶಾದುಲೀ ರಾತೀಬ್ ಮಜ್ಲಿಸ್ ಮಾರ್ಚ್ 6 ಶುಕ್ರವಾರ ರಾತ್ರಿ 8:00 ಗಂಟೆಗೆ ಮರಿಕ್ಕಳ ಮಸ್ಜಿದ್ ನಲ್ಲಿ ನಡೆಯಲಿದೆ.ತಾಜುಲ್ ಪುಖಹಾಹ್ ಖಾಝಿ ಶೈಖುನಾ ಬೇಕಲ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಸಯ್ಯದ್ ಮುಹ್ಸಿನ್ ತಂಙಳ್ ಅವೇಲತ್ ಶಾದುಲೀ ರಾತೀಬ್ ಮಜ್ಲಿಸಿಗೆ ನೇತೃತ್ವ ನೀಡಲಿದ್ದಾರೆ.ಸ್ಥಳೀಯ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ,ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ಪಟ್ಣ ,ಮುಅಲ್ಲಿಮರಾದ ಅಬ್ದುಲ್ ಜಬ್ಬಾರ್ ಸಅದಿ, ಅಬ್ದುರ್ರಝಾಕ್ ಮದನಿ,ಮರಿಕ್ಕಳ ಜಮಾಅತ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಿಲ್,ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಮದಹಿತ್ತಿಲು,ಕೋಶಾಧಿಕಾರಿ ಎನ್ ಎಚ್ ಹನೀಫ್ , ಎಸ್ ವೈಎಸ್.ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ ಮೋಂಟುಗೋಳಿ ಮೊದಲಾದವರು ಉಪಸ್ಥಿತಲಿರುವರು ಎಂದು ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಕಾರ್ಯದರ್ಶಿ ಸಿರಾಜ್ ನಿಡ್ಮಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.