janadhvani

Kannada Online News Paper

ಶಾರ್ಜಾ ಝೋನ್: ಕೆಸಿಎಫ್ ಡೇ ಹಾಗೂ ಪ್ರತಿಭೋತ್ಸವ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭ

ಶಾರ್ಜಾ: ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ 8ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ, ಕೆ ಸಿ ಎಫ್ ಶಾರ್ಜ ಝೋನ್ ವತಿಯಿಂದ ಕೆ ಸಿ ಎಫ್ ಡೇ ಹಾಗೂ ಇತ್ತೀಚೆಗೆ ನಡೆದ ಕೆ ಸಿ ಎಫ್ ಯುಎಇ ನ್ಯಾಷನಲ್ ಪ್ರತಿಭೋತ್ಸವದಲ್ಲಿ ಸತತ ದ್ವಿತೀಯ ಬಾರಿಗೆ ಚಾಂಪಿಯನ್ ಶಿಪ್ ಮುಡಿಗೇರಿಸಿದ ಶಾರ್ಜ ಝೋನಿನ ಪ್ರತಿಭೆಗಳಿಗೆ ಅಭಿನಂದನಾ ಸಮಾರಂಭವನ್ನು ದಿನಾಂಕ 16-2-2020 ರಂದು ಶುಕ್ರವಾರ ‌ಜುಮಾ ನಮಾಝೀನ ಬಳಿಕ ಶಾರ್ಜದ ನ್ಯಾಷನಲ್ ಪಾರ್ಕ್ ನಲ್ಲಿ ‌ಝೋನ್ ಅಧ್ಯಕ್ಷ ಬಹು ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಕೆ ಸಿ ಎಫ್ ಯುಎಇ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಝೈನುದ್ದೀನ್ ಹಾಜಿ‌ ಬೆಳ್ಲಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ,ಕೆಸಿಎಫ್ ಶಾರ್ಜಾ ಝೋನ್ ಅಧ್ಯಕ್ಷರಾದ ಬಹು ಅಬೂಸ್ವಾಲಿಹ್‌ ಸಖಾಫಿಯವರು ಅಧ್ಯಕ್ಷೀಯ ಭಾಷಣ ನಿರ್ವಹಿಸಿದರು ನಂತರ ವಿಶೇಷ ಅತಿಥಿಯಾಗಿ ಆಗಮಿಸಿದ ಬಹು ಯೂ ಸುಫ್ ಸಖಾಫಿ ಕೋಡಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಸಿಎಫ್ ಗಲ್ಫ್ ಮತ್ತು ಹೊರ ದೇಶಗಳಲ್ಲಿ ಮಾಡುತ್ತಿರುವ ಕಾರ್ಯವೈಖರಿಯನ್ನು ಪ್ರಶಂಶಿಸಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ ಸಿ ಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಇಬ್ರಾಹಿಂ ಸಖಾಫಿ ಕೆದುಂಬಾಡಿಯವರು ಪ್ರತಿಭೋತ್ಸವದಲ್ಲಿ ಚಾಂಪಿಯನ್ ಶಿಪ್ ಪಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರುನಂತರ ಇಕ್ಬಾಲ್ ಮಂಜನಾಡಿಯವರು ಸಭಿಕರಿಂದ ಕೆಸಿಎಫ್ ಬಗ್ಗೆ ಸದಸ್ಯರ ಅಭಿಪ್ರಾಯ ಹಾಗೂ ತಮ್ಮ ಅನುಭವವನ್ನು ಹಂಚಿದರು.ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು।ಅಬ್ದುಲ್ ಅಝೀಝ್ ಸಖಾಫಿಯವರು ಸಂಘಟನೆಯ ಉದ್ದೇಶಗಳನ್ನು ಸವಿಸ್ತಾರವಾಗಿ ವಿವರಿಸಿದರು ನಂತರ ಫಾರೂಕ್ ಕುಂಜಿಲಾ ಕೆಸಿ‌ಎಫ್ ಬಗ್ಗೆ ತಮ್ಮ ಮಧುರ ಕಂಠದಿಂದ ಹಾಡಿದರು.

ಕೆ ಸಿ ಎಫ್ ಯುಎಇ ರಾಷ್ಟ್ರೀಯ ಸಮಿತಿ ನ್ಯಾಷನಲ್ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಶಾರ ಪ್ರಾಸ್ತಾವಿಕ ಭಾಷಣಗೈದರು
ಝೋನ್ ಕ್ಯಾಬಿನೆಟ್, ಸೆಕ್ಟರ್,ಯೂನಿಟ್ ಸದಸ್ಯರು ಪಾಲ್ಗೊಂಡ್ಡಿದ್ದರು
ಕಾರ್ಯಕ್ರಮದ ಮೊದಲಿಗೆ ಝೋನ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಹುಸೈನ್ ಇನೋಳಿ ಸ್ವಾಗತಿಸಿ,ನಿಝಾಮುದ್ದೀನ್ ಸಖಾಫಿ ಕಿರಾಅತ್ ಪಠಿಸಿದರು,
ಕೊನೆಯಲ್ಲಿ ಮೂರು ಸ್ವಲಾತಿನೋಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು

error: Content is protected !! Not allowed copy content from janadhvani.com