janadhvani

Kannada Online News Paper

ದೆಹಲಿ ಜನಾಂಗೀಯ ಹತ್ಯೆ: ಖುರ್ರತುಸ್ಸಾದಾತ್ ಕೂರತ್ ತಂಙಳ್ ಖಂಡನೆ

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಐದಾರು ದಿನಗಳಿಂದ ಅಮಾಯಕರ ದೌರ್ಜನ್ಯ,
ಕೊಲೆ,ನಡೆಸುತ್ತಾ ಮಸೀದಿ, ಮನೆ,ವ್ಯಾಪಾರ ಕೇಂದ್ರಗಳನ್ನು ಬೆಂಕಿಗಾಹುತಿ ಗೊಳಿಸಿ ದೆಹಲಿಯನ್ನು ಯುದ್ಧ ಭೂಮಿಯನ್ನಾಗಿ ಪರಿವರ್ತಿಸುತ್ತಿರುವ ಸಮಾಜ ಘಾತುಕ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಸರಕಾರ ಕ್ರಮ ಕೈಗೊಳ್ಳ ಬೇಕೆಂದು ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ಆಗ್ರಹಿಸಿದ್ದಾರೆ.

ಹಿಂಸಾಚಾರವನ್ನು ಹತ್ತಿಕ್ಕಬೇಕಾದವರ ನಿಷ್ಕ್ರಿಯತೆ, ಸಾರ್ವಜನಿಕ ಸೇವೆಯಲ್ಲಿ ಗುರುತಿಸಬೇಕಾದವರು ಹಿಂಸೆಗೆ ಆಹ್ವಾನ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಅವರು ಅಭಿಪ್ರಾಯಪಟ್ಟರು.

ಹಿಂಸೆಯನ್ನು ಹತ್ತಿಕ್ಕಲು ಮತ್ತು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕೆಂದು, ಅವರು ಪತ್ರಿಕಾಪ್ರಕಟಣೆಯಲ್ಲಿ ಆಗ್ರಹಿಸಿದರು.

error: Content is protected !! Not allowed copy content from janadhvani.com