janadhvani

Kannada Online News Paper

ಫೆ:28: ಎಸ್ಸೆಸ್ಸೆಫ್ ಭಿತ್ತಿ ಪತ್ರ ಪ್ರದರ್ಶನ: ಉಡುಪಿ ಜಿಲ್ಲಾ ಮುಸ್ಲಿಂ ಸಂಘಟನೆ ಯಶಸ್ವಿಗೆ ಕರೆ

ಉಡುಪಿ: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರ ಮೇಲೆ ಕ್ರೂರ ಹಿಂಸಾಚಾರ ನಡೆಸಿ, ಅಮಾಯಕರ ಕೊಲೆ, ಸಾರ್ವಜನಿಕ ಆಸ್ತಿಗೆ ಹಾನಿ, ಮಸೀದಿ, ಮನೆಗಳ ಧ್ವಂಸ ಮೊದಲಾದ ಅಮಾನವೀಯ ಕೃತ್ಯಗಳನ್ನು ನಡೆಸುತ್ತಿರುವ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳ ನಡತೆಯನ್ನು ಖಂಡಿಸಿ ನಾಳೆ ಜುಮಾ ನಮಾಝ್ ತಕ್ಷಣ ಎಸ್ಸೆಸ್ಸೆಫ್ ನಡೆಸುತ್ತಿರುವ ಭಿತ್ತಿ ಪತ್ರ ಹಾಗೂ ಪೋಸ್ಟರ್ ಪ್ರದರ್ಶನವನ್ನು ಯಶಸ್ವಿ ಗೊಳಿಸಲು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್, ಜಿಲ್ಲಾ ಸಂಯುಕ್ತ ಜಮಾಅತ್, ಎಸ್ ವೈ ಎಸ್ ಹಾಗೂ ಸುನ್ನೀ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ರಾಷ್ಟ್ರದ ರಾಜಧಾನಿಯ ಈ ಹಿಂಸಾಚಾರ ಕೃತ್ಯವನ್ನು ಮತ್ತು ಗಲಭೆಕೋರರಿಗೆ ಸಾಥ್ ನೀಡುತ್ತಿರುವ ಆಡಳಿತ‌ ವ್ಯವಸ್ಥೆಯನ್ನು ಖಂಡಿಸಿ ನಡೆಸುತ್ತಿರುವ ಈ ಹೋರಾಟದಲ್ಲಿ ಸರ್ವರೂ ಪಾಳ್ಗೂಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದೆ ಎಂದು ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.