janadhvani

Kannada Online News Paper

ಮಸ್ಜಿದುಲ್ ಜಾಮಿಉಲ್ ಅಮೀನ್ ಅಲೇಕಳ: ವಾರ್ಷಿಕ ದ್ಸಿಕ್ರ್ ಹಲ್ಖಾ, ಧಾರ್ಮಿಕ ಪ್ರವಚನ

ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಉಳ್ಳಾಲ, ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮುಹಿಯ್ಯಿದ್ದೀನ್ಳ್ಳ್ ರಾತೀಬ್, ವಾರ್ಷಿಕ ದ್ಸಿಕ್ರ್ ಹಲ್ಖಾ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು 16-2-2020 ರಂದು ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಎಸ್ ಎಮ್ ತಂಙಳ್ ವೇದಿಕೆಯಲ್ಲಿ ನಡೆಯಿತು.

ಪಿ.ಎಸ್.ಎಮ್ ಶಿಹಾಬುದ್ದೀನ್ ಸಖಾಫಿ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷರಾದ ಅಝೀಝ್ ಕೃಷ್ಣಾಪುರ ಅವರನ್ನು, ಆಡಳಿತ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಝೀಝ್ ಕೃಷ್ಣಾಪುರ ಅವರು, ವಕ್ಫ್ ಮಂಡಳಿಯಿಂದ ಮಸೀದಿ ಮದ್ರಸಗಳಿಗೆ ಸಿಗುವ ಅನುದಾನಗಳ ಬಗ್ಗೆ ವಿವರಣೆ ನೀಡಿದರು.

ಈ ಸಂಧರ್ಬದಲ್ಲಿ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ, ಸಯ್ಯಿದ್ ಮದನಿ ದರ್ಗಾ ಮಾಜಿ ಅಧ್ಯಕ್ಷರಾದ ಹಾಜಿ ಯು ಎಸ್ ಹಂಝ, ಉಳ್ಳಾಲ ನಗರ ಸಭಾ ಸದಸ್ಯರಾದ ಯು ಎ ಇಸ್ಮಾಯಿಲ್, ಅಳೇಕಲ ಜಮಾಅತಿನ ಪ್ರ ಕಾರ್ಯದರ್ಶಿ ಫಾರೂಕ್ ಹಾಜಿ, ಉಪಾಧ್ಯಕ್ಷ ರಾದ ಅಶ್ರಫ್ ಯು.ಡಿ, ಕೋಶಾಧಿಕಾರಿ ಯು.ಸಿ ಇಬ್ರಾಹಿಂ ,ಹಫೀಝ್ ಅಲ್ ಫಾಲಿಳಿ, ಎಸ್.ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಹಾಗೂ ಆಡಳಿತ ಸಮಿತಿಯ ಸದಸ್ಯರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com