janadhvani

Kannada Online News Paper

SSF ಕಿನ್ಯ ಸೆಕ್ಟರ್ ಸಮಿತಿಗೆ ನೂತನ ಸಾರಥ್ಯ

ಉಳ್ಳಾಲ:ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕಿನ್ಯ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ 14-2-2020 ರಂದು ರಾತ್ರಿ 8:00 ಘಂಟೆಗೆ ಸುನ್ನೀ ಸೆಂಟರ್ ಬೆಳರಿಂಗೆ ಕಿನ್ಯದಲ್ಲಿ, ಸೆಕ್ಟರ್ ಅಧ್ಯಕ್ಷರಾದ ಇರ್ಫಾನ್ ನೂರಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೆಕ್ಟರ್ ಉಸ್ತುವಾರಿ ಸಿರಾಜುದ್ದೀನ್ ತಲಪಾಡಿ ಅವರು ವೀಕ್ಷಕರಾಗಿ ಕಾರ್ಯ ನಿರ್ವಹಿಸಿದ ವಾರ್ಷಿಕ ಮಹಾಸಭೆಯನ್ನು ಸಯ್ಯಿದ್ ಝೈನುಲ್ ಆಬಿದ್ ಸಅದಿ ತಂಙಳ್ ಅವರ ದುಆ ಮೂಲಕ ಪ್ರಾರಂಭಿಸಿ, ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಮೊಹಮ್ಮದ್ ರಝ್ವಿ ಕಲ್ಕಟ್ಟ ಉಸ್ತಾದರು ಉಧ್ಘಾಟಿಸಿದರು.

K.H ಇಸ್ಮಾಯಿಲ್ ಸಅದಿ ಸಂಘಟನೆಯ ಮುಂದಿನ ಹಾಗು- ಹೋಗುಗಳ ಕುರಿತು ಮಾತನಾಡಿದರು. ದ.ಕ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಖಾಮಿಲ್ ಸಖಾಫಿಯವರು “ಭಯ ಬಿಡಿ ಬರವಸೆ ಇಡಿ”ಎಂಬ ವಿಷಯದ ಬಗ್ಗೆ ಸಂಘಟನಾ ತರಗತಿ ನಡೆಸಿದರು.

ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಹುಮೈದಿ, SSF ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ,V.A ಮೊಹಮ್ಮದ್ ಮುಸ್ಲಿಯಾರ್, ಉಸ್ಮಾನ್ ಝುಹ್ರಿ ಕುರಿಯ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಫಯಾಝ್ ಕಿನ್ಯ ಸ್ವಾಗತಿಸಿ ವಾರ್ಷಿಕ ವರದಿ ನಡೆಸಿದರು. ಸಫ್ವಾನ್ ಮೀಂಪ್ರಿ ಆಯ-ವ್ಯಯ ವರದಿ ಮಂಡಿಸಿದರು ನೂತನ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ ಧನ್ಯವಾದವಿತ್ತರು.

ನೂತನ ಸಮಿತಿಯ ಸಾರಥಿಗಳು

ಅಧ್ಯಕ್ಷರು:.ಸಯ್ಯಿದ್ ಝೈನುಲ್ ಆಬಿದ್ ತಂಙಳ್
ಉಪಾಧ್ಯಕ್ಷರು:ಫಯಾಝ್ ಕಿನ್ಯಾ, ನೌಫಲ್ ಅಹ್ಸನಿ

ಪ್ರಧಾನ ಕಾರ್ಯದರ್ಶಿ:ಬಶೀರ್ ಬೆಳರಿಂಗೆ
ಜೊತೆ ಕಾರ್ಯದರ್ಶಿ:ಸಫ್ವಾನ್ ಮೀಂಪ್ರಿ, ಜಲೀಲ್ ಕುತುಬಿ ನಗರ.

ಕೋಶಾಧಿಕಾರಿ: ಜಾಫರ್ ಕುತುಬಿ ನಗರ, ಕ್ಯಾಂಪಸ್ ಕಾರ್ಯದರ್ಶಿ:ಸಾದಿಕ್ ಕುರಿಯ ಹಾಗೂ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.

ವರದಿ:ಫಯಾಝ್ ಕಿನ್ಯ

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!