ಅಲ್ ಹಸ್ಸದಲ್ಲಿ ಕೆಸಿಎಫ್ ಫೌಂಡೇಶನ್ ಡೇ

ದಮ್ಮಾಂ : ಕೆಸಿಎಫ್(ಕರ್ನಾಟಕ ಕಲ್ಚರಲ್ ಫೌಂಡೇಶನ್) ಅಲ್ ಹಸ್ಸ ಸೆಕ್ಟರ್‌ ವತಿಯಿಂದ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಅಧ್ಯಕ್ಷ ಹಬೀಬ್ ಉಸ್ತಾದರ ಅಧ್ಯಕ್ಷತೆಯಲ್ಲಿ ಹಫೂಫ್ ಸ‌ಅದಿಯಾ ಹಾಲ್ ನಲ್ಲಿ ಅದ್ದೂರಿಯಾಗಿ ‘ ಕೆಸಿಎಫ್ ಫೌಂಡೇಶನ್ ಡೇ’ ಆಚರಿಸಲಾಯಿತು.

ಉಸ್ತಾದ್ ಇಬ್ರಾಹಿಂ ಸ‌ಅದಿ,ಅಹ್ಮದ್ ಸ‌ಅದಿ,ನೌಶಾದ್ ಅಮಾನಿ ಮತ್ತು ಇಕ್ಬಾಲ್ ಜಿ.ಕೆ.ಗುಲ್ವಾಡಿ ಆಶಂಸ ಭಾಷಣ ಮಾಡಿದರು.
ಕೆಸಿಎಫ್ ದಾಯಿ ಉಮರ್ ಫಾರೂಖ್ ಬ‌ಅಹ್‌ಸನಿ ಮುಖ್ಯ ಭಾಷಣ ಮಾಡಿ,ಆಧ್ಯಾತ್ಮಿಕತೆಯಿಂದ ಮಾತ್ರ ಪಾರಾರ್ತಿಕ ವಿಜಯ ಸಾಧ್ಯ. ಜಗತ್ತಿನಲ್ಲಿಂದು ಎಲ್ಲವೂ ಇದೆ ಆಧ್ಯಾತ್ಮಿಕತೆಗೆ ಮಾತ್ರ ಬರ ಹಿಡಿದಿದೆ ಎಂದರು.

ಕಳೆದ ಬೆರಳೆಣಿಕೆಯ ವರ್ಷಗಳಲ್ಲಿ ಕೆಸಿಎಫ್ ಕಾರ್ಯಕರ್ತರು ಮಾಡಿದ ರಿಲೀಫ್, ಹಜ್ಜ್ ಸ್ವಯಂ ಸೇವಕರು ,ವರದಕ್ಷಿಣೆ ರಹಿತ ವಿವಾಹ ಮತ್ತು ಇಸ್ಲಾಮೀ ಆಶಯ, ಶಿಷ್ಟಾಚಾರದಲ್ಲಿ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಮಾಡಿದ ಪರಿವರ್ತನೆ ಮುಂತಾದ ಅದ್ವಿತೀಯ ಇಹ್ಸಾನ್ ಸೇವೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ವೇದಿಕೆಯಲ್ಲಿ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಅಧ್ಯಕ್ಷ ಹಬೀಬ್ ಉಸ್ತಾದ್ ಮರ್ದಲಾ,ಅಹ್ಮದ್ ಸ‌ಅದಿ, ಸಮಿ ಎಂಬಸ್ಸಿ ಮಾಲಕ, ಹಾಜಿ ಅಬ್ದುರ್ರಹ್ಮಾನ್ ಉಚ್ಚಿಲ, ನೌಶಾದ್ ಅಮಾನಿ,ಉಮರ್ ಪಾರೂಖ್ ಬ‌ಅಹ್‌ಸನಿ,ಇಬ್ರಾಹಿಂ ಸ‌ಅದಿ ಮತ್ತು
ಶಂಸುದ್ದೀನ್ ಕೊಡಗು, ಹುಫುಫ್ ಯೂನಿಟ್ ಅಧ್ಯಕ್ಷ ಅಬೂಬಕ್ಕರ್ ಕಿಲ್ಲೂರ್ ,ಮುಬಾರಾಜ್ ಯೂನಿಟ್ ಅಧ್ಯಕ್ಷ ಅಬ್ದುಲ್ಲಾ ಪುಲಾಬೆ ಉಪಸ್ಥಿತರಿದ್ದರು.

ಸಮದ್ ಬೇಂಗಿಲ ಕಿರಾತ್ ಪಠಿಸಿದರು
ಇಸ್ಹಾಕ್ ಸಿ ಐ ಫಜೀರ್ ಸ್ವಾಗತಿಸಿ,ಪ್ರ.ಕಾರ್ಯದರ್ಶಿ ಹಾರೀಸ್ ಕಾಜೂರು ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!