janadhvani

Kannada Online News Paper

“ಗೋಲಿ ಮಾರೋ” ಪ್ರಚೋದನೆಕಾರಿ ಹೇಳಿಕೆಯೇ ಬಿಜೆಪಿ ಸೋಲಿಗೆ ಕಾರಣ- ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆಗೂ ದೆಹಲಿ ಚುನಾವಣಾ ಫಲಿತಾಂಶದ ಕುರಿತು ತಮ್ಮ ಮೌನ ಮುರಿದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ತಾವು ಹಾಗೂ ತಮ್ಮ ಪಕ್ಷ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ‘ಗೋಲಿ ಮಾರೋ‘ ಹಾಗೂ ‘ಭಾರತ-ಪಾಕ್ ಸಮರ‘ ಗಳಂತಹ ಘೋಷಣೆಗಳನ್ನು ನೀಡಬಾರದಿತ್ತು ಎಂದಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಉಂಟಾಗಿದೆ ಎಂದಿದ್ದಾರೆ.

ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ದೆಹಲಿಯ ರಿಥಾಲಾ ಕ್ಷೇತ್ರದಲ್ಲಿ BJP ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ರೋಚ್ಚಿಗೆಬ್ಬಿಸುವ ಟಿಪ್ಪಣಿ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, “ಗೋಲಿ ಮಾರೋ” (ಗುಂಡಿಕ್ಕಿ..) ಎಂಬ ವಿವಾದಾತ್ಮಕ ಟಿಪ್ಪಣಿ ಮಾಡಿದ್ದರು.

ಚುನಾವಣೆಯ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ BJP ಅಭ್ಯರ್ಥಿ ಕಪಿಲ್ ಮಿಶ್ರಾ, “ಫೆಬ್ರುವರಿ 8ರಂದು ದೆಹಲಿಯಲ್ಲಿ ಭಾರತ-ಪಾಕ್ ನಡುವೆ ಯುದ್ಧ ನಡೆಯಲಿದೆ’ ಎಂದಿದ್ದರು.

ಅತ್ತ ಇನ್ನೊಂದೆಡೆ ದೆಹಲಿಯ ಮತ್ತೋರ್ವ BJP ಅಭ್ಯರ್ಥಿ ತಮ್ಮ ಪ್ರಚಾರದ ವೇಳೆ ರಾಷ್ಟ್ರರಾಜಧಾನಿಯಲ್ಲಿ ಸುಮಾರು 500 ಸರ್ಕಾರಿ ಆಸ್ತಿಗಳ ಮೇಲೆ ಮಸೀದಿ ಹಾಗೂ ಸ್ಮಶಾನಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಆಸ್ಪತ್ರೆ ಹಾಗೂ ಶಾಲೆಗಳೂ ಕೂಡ ಶಾಮೀಲಾಗಿವೆ ಎಂದಿದ್ದರು. ಅಷ್ಟೇ ಅಲ್ಲ ಅಕ್ರಮವಾಗಿ ನಿರ್ಮಾಣ ಕೈಗೊಂಡ ಈ ಜಾಗಗಳು ದೆಹಲಿ ವಿಕಾಸ ಪ್ರಾಧಿಕಾರ, ದೆಹಲಿ ನಗರ ನಿಗಮ, ದೆಹಲಿ ಜಲ ಬೋರ್ಡ್ ಹಾಗೂ ಅನ್ಯ ಸರ್ಕಾರಿ ಏಜೆನ್ಸಿಗಳಿಗೆ ಒಳಪಟ್ಟಿವೆ ಎಂದಿದ್ದರು.

ಈ ಇಬ್ಬರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಠಾಕೂರ್ ಹಾಗೂ ವರ್ಮಾ ಅವರ ಪ್ರಚಾರದ ಮೇಲೆ ಕ್ರಮೇಣವಾಗಿ 72ಗಂಟೆ ಹಾಗೂ 96ಗಂಟೆ ನಿಷೇಧ ವಿಧಿಸಿತ್ತು.

“ನಾನು 3 ದಿನಗಳ ಸಮಯ ನೀಡಲಿದ್ದು, ಈ ಸಮಯದಲ್ಲಿ ಯಾರು ಬೇಕಾದರೂ ನನ್ನ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ (CAA)ಗೆ ಸಂಬಂಧಿಸದಂತೆ ಚರ್ಚೆ ನಡೆಸಬಹುದಾಗಿದೆ” ಎಂದು ಶಾ ಹೇಳಿದ್ದಾರೆ.

error: Content is protected !! Not allowed copy content from janadhvani.com