ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಟ್ರಂಪ್ ಆಡಳಿತದ ಹೊಸ ಶಾಂತಿ ಯೋಜನೆಯೊಂದಿಗೆ ಸಹಕರಿಸುವುದಿಲ್ಲ ಎಂಬ ಪ್ಯಾಲಸ್ತೀನಿಯನ್ ನಿಲುವಿಗೆ ಅರಬ್ ಜಗತ್ತು ಸಹಮತ ಸೂಚಿಸಿದೆ. ಪ್ಯಾಲಸ್ತೀನಿಯನ್ ಸಮಾಜವನ್ನು ಇಂತಹ ಆಧಾರರಹಿತ ಯೋಜನೆಗಳಿಂದ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಅರಬ್ ಜಗತ್ತು ಸ್ಪಷ್ಟಪಡಿಸಿದೆ. ಆದರೆ ಟ್ರಂಪ್ ಆಡಳಿತವು ಮೈತ್ರಿ ಮಾಡಿಕೊಂಡಿರುವ ಅರಬ್ ದೇಶಗಳಲ್ಲಿ ಹೊಂದಾಣಿಕೆ ಉಂಟುಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಟ್ರಂಪ್ರ ಹೊಸ ಶಾಂತಿ ಯೋಜನೆಯನ್ನು ತಿರಸ್ಕರಿಸುವಂತೆ ಪ್ಯಾಲಸ್ತೀನಿಯನ್ ಪ್ರಧಾನಿ ಮುಹಮ್ಮದ್ ಸ್ತಯ್ಯಹ್ ಜಗತ್ತಿಗೆ ಕರೆ ನೀಡಿದ್ದಾರೆ. ಪಶ್ಚಿಮ ಏಷ್ಯಾದ ಸಮಸ್ಯೆಯ ರಹಸ್ಯವನ್ನು ಒಳಗೊಳ್ಳದ ಯೋಜನೆಗಳ ಮೂಲಕ ರಾಜಕೀಯ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ರಕ್ಷಿಸುವ ಸಲುವಾಗಿ ಈ ಯೋಜನೆಗೆ ಅಮೆರಿಕ ಮುಂದಾಗಿದೆ ಎಂದು ಪ್ಯಾಲಸ್ತೀನಿಯನ್ ನಾಯಕ ಆರೋಪಿಸಿದ್ದಾರೆ.
ಟ್ರಂಪ್ರ ಶಾಂತಿ ಯೋಜನೆಯು ಪ್ಯಾಲಸ್ತೀನಿಯನ್ ಪ್ರಾಂತ್ಯಗಳ ಮೇಲೆ ಇಸ್ರೇಲ್ನ ಸಾರ್ವಭೌಮತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂಬ ಆರೋಪ ಬಲವಾಗಿದೆ. ಇತ್ತೀಚೆಗೆ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಟ್ರಂಪ್ ಈ ಯೋಜನೆಯನ್ನು ಪ್ರಕಟಿಸಿದ್ದಾರೆ.
ಅಂತರ್ರಾಷ್ಟ್ರೀಯ ಮಾನದಂಡಗಳನ್ನು ಕಡೆಗಣಿಸಿ ಟ್ರಂಪ್ ಆಡಳಿತ ಆವಿಷ್ಕಾರಗೊಳಿಸುವ ಯೋಜನೆಯನ್ನು ತಿರಸ್ಕರಿಸುಂತೆ ಪ್ಯಾಲಸ್ತೀನಿಯನ್ ಸರಕಾರ ವಿಶ್ವ ನಾಯಕರಿಗೆ ಕರೆ ನೀಡಿದೆ. ಈ ವಿಷಯದಲ್ಲಿ ಅರಬ್ ವಲಯದ ಬೆಂಬಲ ತಮಗಿದೆ ಎಂದು ಅದು ವ್ಯಕ್ತಪಡಿಸಿದೆ. ಅರಬ್ ಲೀಗ್ ಶೀಘ್ರದಲ್ಲೇ ತನ್ನ ನಿಲುವನ್ನು ವ್ಯಕ್ತಪಡಿಸಲಿದೆ.
ಟೆಲ್ ಅವೀವ್ ನಿಂದ ತನ್ನ ಕಾರ್ಯಾಲಯವನ್ನು ಜೆರುಸಲೇಂಗೆ ಸ್ಥಾನಾಂತರಗೊಳಿಸಿರುವ ನಡೆ ಸಹಿತ ಟ್ರಂಪ್ ಜಾರಿಗೆ ತಂದ ಎಲ್ಲಾ ಯೋಜನೆಗಳಲ್ಲೂ ಇಸ್ರೇಲ್ನ ಹಿತಾಸಕ್ತಿ ಇದೆ. ಆ ಕಾರಣದಿಂದಾಗಿ ಅಮೆರಿಕದೊಂದಿಗೆ ಶಾಂತಿಗೆ ಸಂಬಂಧಿಸಿದ ಯಾವುದೇ ಚರ್ಚೆ ಅಗತ್ಯವಿಲ್ಲ ಎಂಬುದು ಫೆಲಸ್ತೀನ್ನ ನಿಲುವಾಗಿದೆ. ಇಂಪೀಚ್ಮೆಂಟ್ ಪ್ರಕ್ರಿಯೆ ಮುಗಿದ ತಕ್ಷಣ ಟ್ರಂಪ್ ಅರಬ್ ದೇಶಗಳಲ್ಲಿ ಶಾಂತಿ ಯೋಜನೆ ಕುರಿತು ಆಶಯ ವಿನಿಮಯ ನಡೆಸಲಿದ್ದಾರೆ ಎಂದು ವರದಿಯಾಗಿದೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ