janadhvani

Kannada Online News Paper

ಶಾರ್ಜಾ :ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಆಯೋಜಿಸುತ್ತಿರುವಂತಹ ನ್ಯಾಷನಲ್ ಪ್ರತಿಭೋತ್ಸವ-2020 ಜನವರಿ 31 ಶುಕ್ರವಾರ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣ ಶಾರ್ಜಾದಲ್ಲಿ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ನಡೆಯುವ ಇನ್ಸೆಪ್ಷನ್ ಸಮಾರಂಭದಲ್ಲಿ ಭಾರತದ ಹೊರಗೆ ಪ್ರಕಾಶನವಾಗುತ್ತಿರುವ ಕನ್ನಡದ ಪ್ರಥಮ ಪತ್ರಿಕೆ ಗಲ್ಫ್ ಇಶಾರಾ ನಾಲ್ಕನೇ ವರ್ಷದ ಚಂದಾ ಅಭಿಯಾನಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಚಾಲನೆ ನೀಡಲಿದ್ದಾರೆ. ಪ್ರತಿಭೋತ್ಸವ ಸ್ವಾಗತ ಸಮಿತಿ ಛೇರ್ಮನ್ ಹಾಜಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ ಹಾಜಿ ಶೈಖ್ ಬಾವಾ ಮಂಗಳೂರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ನಾಲ್ಕು ವೇದಿಕೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಯುಎಇ ಯ ಏಳು ಎಮಿರೇಟ್ಸ್ ಗಳಿಂದ 500 ಕ್ಕೂ ಅಧಿಕ ಕನ್ನಡಿಗ ಪ್ರತಿಭೆಗಳು 33 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಕೆಸಿಎಫ್ ಕಾರ್ಯಕರ್ತರು ವಿದ್ಯಾರ್ಥಿಗಳು ಮತ್ತು 200 ರಷ್ಟುಕುಟುಂಬಗಳು ಪಾಲ್ಗೊಳ್ಳಲಿರುವ ಪ್ರತಿಭೋತ್ಸವದಲ್ಲಿ ಮಹಿಳೆಯರಿಗೆ ಪುಡ್ಡಿಂಗ್, ಬೆಸ್ಟ್ ಔಟ್ ಆಫ್ ವೇಸ್ಟ್, ರಸಪ್ರಶ್ನೆ ವಿಭಾಗಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿರವರ ಅಧ್ಯಕ್ಷತೆಯಲ್ಲಿ ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ ಕೇಂದ್ರದ ಮಾಜೀ ಸಚಿವರೂ ಆದ ಸಿಎಂ ಇಬ್ರಾಹಿಂ ರವರು ಉದ್ಘಾಟಿಸಲಿದ್ದಾರೆ. ಡಾ ಪಿಎ ಇಬ್ರಾಹಿಂ ಹಾಜಿ (ಛೇರ್ಮನ್ ಪೇಸ್ ಇಂಟರ್ನ್ಯಾಷನಲ್ ಗ್ರೂಪ್), ಯೂಸುಫ್ ಸಖಾಫಿ ಕೋಡಿ, ಹನೀಫ್ ಮಂಜನಾಡಿ (ಛೇರ್ಮನ್, ಹಜ್ಜ್ ವಲಂಟಿಯರ್ ಕೋರ್ ಕೆಸಿಎಫ್ ಸೌದಿ ಅರೇಬಿಯಾ), ಅಹ್ಮದ್ ಇಬ್ರಾಹಿಂ ಹಮ್ಮದೀ (ಡೈರೆಕ್ಟರ್, ಯೂನಿಫೆಕ್ಸ್ ಇಂಟರ್ನ್ಯಾಷನಲ್), ಜನಾಬ್ ಬಿಎಂ ಮುಮ್ತಾಝ್ ಅಲಿ (ಜನರಲ್ ಸೆಕ್ರೇಟರಿ, ಕರ್ನಾಟಕ ಮುಸ್ಲಿಂ ಜಮಾಅತ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ), ಡಾ ಯುಟಿ ಇಫ್ಟಿಕಾರ್ (ಸೆನಟ್ ಸದಸ್ಯರು, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ, ಬೆಂಗಳೂರು), ಜನಾಬ್ ಎನ್ ಅಬ್ದುಲ್ ಸಮದ್ (ಮ್ಯಾನೇಜಿಂಗ್ ಡೈರೆಕ್ಟರ್, ಅಲ್ ಮಝರ್ ಮೆಟಲ್ ಶಾರ್ಜಾ), ಎನ್ ಶಾಜಿ ಚೆರಿಯಾನ್ (ಖ್ಯಾತ ಉದ್ಯಮಿಗಳು ಮತ್ತು ಯುಎಇ ಪಯನೀರ್ ಪ್ರಶಸ್ತಿ ವಿಜೇತರು), ಜನಾಬ್ ಮುಹಮ್ಮದ್ ಅನ್ವರ್ (ಮ್ಯಾನೇಜಿಂಗ್ ಡೈರೆಕ್ಟರ್, ಸಾಜಿದಾ ಗ್ರೂಪ್), ಅಬ್ದುಲ್ ಹಮೀದ್ ಸಅದಿ (ಹಣಕಾಸು ನಿಯಂತ್ರಕರು, ಕೆಸಿಎಫ್ ಐಎನ್’ಸಿ), ಮುಸ್ತಫಾ ನಈಮಿ (ಕಾರ್ಯದರ್ಶಿ ಎಸ್ಸೆಸ್ಸೆಫ್ ಕರ್ನಾಟಕ), ಅಬ್ದುಲ್ಲಾ ಮದುಮೂಲೆ (ಕಾರ್ಯದರ್ಶಿ ಅಬುಧಾಬಿ ಇಂಡಿಯನ್ ಸ್ಕೂಲ್) ಅಬ್ದುಲ್ ಹಮೀದ್ ಈಶ್ವರಮಂಗಿಲ (ಗಲ್ಫ್ ಇಶಾರಾ ಪ್ರಕಾಶಕರು) ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಂಘಿಕ ನಾಯಕರುಗಳು, ಸಾಮಾಜಿಕ ನೇತಾರರುಗಳು ಭಾಗವಹಿಸಲಿದ್ದಾರೆ.

2013 ಫೆಬ್ರವರಿ 13 ರಂದು ಮಾಯಾನಗರಿ ದುಬೈ ಯಲ್ಲಿ ಜನ್ಮ ತಾಳಿದ ಜನ್ಮತಾಳಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ 15000 ಕ್ಕೂ ಮಿಕ್ಕ ಕನ್ನಡಿಗ ಸದಸ್ಯರನ್ನೊಳಗೊಂಡು ಅರಬ್ ರಾಷ್ಟ್ರಗಳು ಮತ್ತು ಮಲೇಷ್ಯಾ ಲಂಡನ್ ನಲ್ಲಿ ಕಾರ್ಯಾಚರಿಸುತ್ತಿದೆ. ಹಲವಾರು ಸಾಮಾಜಿಕ, ಶೆಕ್ಷಣಿಕ, ಸಾಮುದಾಯಿಕ ಸೇವೆಗಳೊಂದಿಗೆ ಗುರುತಿಸಿಕೊಂಡಿರುವ ಕೆ.ಸಿ.ಎಫ್ ನಿರಾಶ್ರಿತರಿಗೆ ಆಶ್ರಯ ಯೋಜನೆ, ಬಡವರ ಕಲ್ಯಾಣ ಯೋಜನೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಉತ್ತರ ಕರ್ನಾಕದಲ್ಲಿ ಉಚಿತ ಶಿಕ್ಷಣ ಸಂಸ್ಥೆಗಳು ಮೊದಲಾದ ಜನಪರ ಸೇವೆಗಳನ್ನುಮಾಡುತ್ತಾ ಬರುತ್ತಿದೆ. ಗಲ್ಫ್ ರಾಷ್ಟ್ರದಲ್ಲಿ ಅಲ್ಲಿನ ಸರಕಾರದ ಅನುಮೋದನೆಯೊಂದಿಗೆ ಮೊತ್ತ ಮೊದಲ ಬಾರಿಗೆ ಗಲ್ಫ್ ಇಶಾರ ಕನ್ನಡ ಮಾಸಿಕವು ಬಿಡುಗಡೆಗೊಳಿಸಿ ಪ್ರತಿಯೊಬ್ಬಅನಿವಾಸಿ ಕನ್ನಡಿಗನ ಮನೆ ಬಾಗಿಲಿಗೆ ತಲುಪುತ್ತಿದೆ. ಇದು ವಿದೇಶ ರಾಷ್ಟ್ರಗಳಲ್ಲಿ ಕೆಸಿಎಫ್ ಕನ್ನಡ ಭಾಷೆ, ಜಲ, ನೆಲ, ಸಂಸ್ಕೃತಿಗೆ ನೀಡುವ ಗೌರವವಾಗಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮೊದಲಾದ ಭಾರತದ ರಾಷ್ಟ್ರೀಯ ದಿನಗಳನ್ನು ವಿವಿಧ ಎಮಿರೇಟ್ಸ್ ಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರನ್ನುಸೇರಿಸಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.

ಅನಿವಾಸಿ ಕನ್ನಡಿಗರ ಪಾಲಿಗೆ ಆಶಾಕಿರಣವಾಗಿ, ವೀಸಾ, ಪಾಸ್ಪೋರ್ಟ್ ಸಮಸ್ಯೆಗಳಿಂದ ಊರಿನ ದಾರಿಯೇ ಕಮರಿ ಹೋದ ಅದೆಷ್ಟೋ ಪ್ರವಾಸಿಗಳಿಗೆ ಜಾತಿ ಧರ್ಮ ನೋಡದೆ ಕಾನೂನು ರೀತಿಯ ಸಹಾಯ ಮಾಡಿ ಕೊಟ್ಟು ಅವರನ್ನು ಊರಿಗೆ ಕಳುಹಿಸಿಕೊಟ್ಟು ಸಹಕರಿಸುತ್ತಿದೆ. ಚಿಕ್ಕ ಪುಟ್ಟ ಕಾರಣಗಳಿಂದ ಜೈಲು ಸೇರಿದ ಅಮಾಯಕರನ್ನು ಬಿಡುಗಡೆಗೊಳಿಸಿ ಅವರ ಕುಟುಂಬದ ಕಣ್ಣೀರು ಒರೆಸಿಕೊಟ್ಟಿದೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ರೋಗಿಗಳನ್ನುಕಂಡು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಮಾಡಿ ಕೊಟ್ಟು ಅವರನ್ನು ಕುಟುಂಬಕ್ಕೆ ತಲುಪಿಸಿಕೊಟ್ಟಿದೆ. ವಿದೇಶ ರಾಷ್ಟ್ರಗಳಲ್ಲಿ ಅಫಘಾತದಿಂದ ಮರಣ ಹೊಂದಿದ ಕುಟುಂಬಗಳಿಗೆ ಸಂತ್ವಾನವನ್ನು ಮಾಡಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಅವರ ಕಣ್ಣೀರು ಒರೆಸುವಂತಹ ಕೆಲಸಗಳನ್ನು ಮಾಡುತ್ತಿದೆ.

ದುಬೈ ಪರ್ಲ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಬ್ರೈಟ್ ಮಾರ್ಬಲ್ ಅಬುಧಾಬಿ, ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಮೋಸ ಹಾಜಿ ಬಸರ, ಝೈನುದ್ದೀನ್ ಹಾಜಿ ಬೆಳ್ಳಾರೆ,ಉದ್ಯಮಿ ಅಬ್ದುಲ್ ಸಮದ್ ಶಾರ್ಜಾ, ರಫೀಕ್ ಕಲ್ಲಡ್ಕ, ಹನೀಫ್ ಹಾಜಿ ಬಸರ, ಕರೀಂ ಮುಸ್ಲಿಯಾರ್ ಶಾರ್ಜಾ, ನಿಝಾಮುದ್ದೀನ್ ಮದನಿ ಅಜ್ಮಾನ್, ಅಬ್ದುಲ್ ಖಾದರ್ ಸಾಲೆತ್ತೂರು, ನವಾಜ್ ಕೋಟೆಕಾರ್ ಉಪಸ್ಥಿತರಿದ್ದರು.
ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದೆ.

error: Content is protected !!
%d bloggers like this: