janadhvani

Kannada Online News Paper

SJM 30 ನೇ ವಾರ್ಷಿಕ ಘೋಷಣಾ ಸಮಾವೇಶ: ಜ.29 ರಂದು ಬೆಂಗಳೂರಿನಲ್ಲಿ

ಬೆಂಗಳೂರು : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ 30ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯಲಿರುವ ನ್ಯಾಷನಲ್ ಕಾನ್ಫರೆನ್ಸ್ ನ ಘೋಷಣಾ ಸಮಾವೇಶವು ಜನವರಿ ತಿಂಗಳ 29ರಂದು ಭಾರತದ ಉದ್ಯಾನ ನಗರಿ ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆಯಲಿದೆ.

ಸುಲ್ತಾನುಲ್ ಉಲಮಾ ಶೈಖುನಾ ಎ ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್, ಬೆಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಪ್ರೋ. ವೇಣುಗೋಪಾಲ್ ಸರ್, ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ವಿ. ಗೋಪಾಲ ಗೌಡ, ಡಾ. ಎಪಿ ಅಬ್ದುಲ್ ಹಕೀಮ್ ಅಝ್ಹರಿ, ಶ್ರೀ ಶಿವರುದ್ರ ಮಹಾಸ್ವಾಮಿ, ಮೊದಲಾದ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿರುವರು.

ಇದರ ಸಿದ್ಧತೆಗಳು ಈಗಾಗಲೇ ಸಂಪೂರ್ಣವಾಗಿ ನಡೆದಿದ್ದು, ಭಾರತದ ವಿವಿಧ ಕಡೆಗಳಿಂದ ಆಯ್ದ 500 ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.!
ಪ್ರಸ್ತುತ ಸಮ್ಮೇಳನದಲ್ಲಿ ಸ್ಪಿರಿಚ್ಯುವೆಲ್ ಕಾನ್ಫರೆನ್ಸ್ ಮತ್ತು ಸೆಮಿನಾರ್ ನಡೆಯಲಿದ್ದು, 30ನೇ ವಾರ್ಷಿಕದ ಘೋಷಣೆಯಾದ, “ಪ್ರೀತಿ,ಕರುಣೆ,ಶಾಂತಿ” ಎಂಬೀ ವಿಷಯಗಳನ್ನು ಸೆಮಿನಾರಿನಲ್ಲಿ ಚರ್ಚೆಗೆ ಆಯ್ಕೆ ಮಾಡಲಾಗಿದೆ.

2020 ಜನವರಿ-ಡಿಸೆಂಬರ್ ಕಾಲಾವಧಿಯಲ್ಲಿ ನಡೆಯಲಿರುವ ಮೂವತ್ತನೇ ವಾರ್ಷಿಕದ ಯೋಜನೆಗಳನ್ನು ಬೆಂಗಳೂರಿನ ಸಮಾವೇಶದಲ್ಲಿ ಮಂಡಿಸಲಾಗುವುದು. ಖ್ಯಾತ ಭಾಷಣಗಾರ ಡಾಕ್ಟರ್ ಮುಹಮ್ಮದ್ ಫಾರೂಖ್ ನಈಮಿ ಅಲ್ ಬುಖಾರಿರವರು ಈ ಕಾರ್ಯಕ್ರಮದಲ್ಲಿ ವಿಷಯ ಮಂಡಿಸುವರು.ದೇಶದ ವಿವಿಧೆಡೆಗಳ ವಿಶೇಷ ಪ್ರತಿನಿಧಿಗಳು ಅತಿಥಿಗಳಾಗಿ ಪ್ರಸ್ತುತ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಕೇಂದ್ರ ಸಮಿತಿ ನಾಯಕರು ಮತ್ತು ಸ್ವಾಗತ ಸಮಿತಿ ಸಾರಥಿಗಳ ಜಂಟಿ ಸಭೆಯು, ಎಸ್ಎಸ್ಎ ಕಾದರ್ ಹಾಜಿಯವರ ನಾಯಕತ್ವದಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತದ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿನಿಧಿಗಳನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿ ನಿಂತಿದೆ.!

ಕನ್ನಡಕ್ಕೆ : ಕೊಡಂಗಾಯಿ ಸಖಾಫಿ

error: Content is protected !! Not allowed copy content from janadhvani.com