janadhvani

Kannada Online News Paper

ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಇದರ ಸಖಾಫಿ ಸಂಗಮ ಹಾಗೂ ವಾರ್ಷಿಕ ಮಹಾಸಭೆ ಜನವರಿ 28 ರಂದು ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಪಡೀಲ್ ಇಲ್ಮ್ ಸೆಂಟರ್ ಮರ್ಹೂಂ ಬೀರಾನ್ ಕುಟ್ಟಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಕೌನ್ಸಿಲ್ ಕೋಶಾಧಿಕಾರಿ ಮುಹಮ್ಮದ್ ಸಖಾಫಿ ಮೊಂಟೆಪದವು ದುಆ ನೆರವೇರಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಖಾಫಿ ಪೂಡಲ್ ಕಾರ್ಯಕ್ರಮ ಉದ್ಘಾಟಿಸಿದರು. ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಉಸ್ತಾದರು ಅಧ್ಯಕ್ಷ ಭಾಷಣ ಮಾಡಿ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ತಾಲೂಕು ಸಖಾಫಿ ಕೌನ್ಸಿಲ್ ನಡೆಸಿದ ಕಾರ್ಯಕ್ರಮಗಳ ಕುರಿತು ಮೆಲುಕು ಹಾಕಿ ಮಾತನಾಡುತ್ತಾ ಅದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಮರ್ಕಝ್ ಮತ್ತು ಅದರ ಕಾರ್ಯ ವೈಖರಿಗಳು” ಎಂಬ ವಿಷಯದಲ್ಲಿ ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ಇದರ ಸ್ಥಾಪಕರಾದ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮಾತನಾಡಿ ಗುರು ಶಿಷ್ಯ ಸಂಬಂಧ ಅತ್ಯಂತ ಪವಿತ್ರವಾದುದು, ನಿಶ್ಕಲಂಕ ಮನೋಭಾವದಿಂದ ಗುರುವನ್ನು ಸ್ವೀಕರಿಸಿದವರು ಪರಾಜಯ ಹೊಂದಲಾರರು ಎಂದು ತಿಳಿಸಿದರು.

ರಾಜ್ಯ ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿಯವರ ನೇತೃತ್ವದಲ್ಲಿ ಇತ್ತೀಚೆಗೆ ನಮ್ಮಿಂದ ಅಗಲಿದ ಕ್ಯಾಲಿಕಟ್ ಕಾರಂದೂರ್ ಮರ್ಕಝಿನ ದೀರ್ಘ ಕಾಲ ಮುದರ್ರಿಸರಾದ ಉಸ್ತಾದ್ ಬೀರಾನ್ ಕುಟ್ಟಿ ಮುಸ್ಲಿಯಾರ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ನಡೆಯಿತು. ತಾಲೂಕು ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

ಚುನಾವಣಾ ವೀಕ್ಷಕರಾಗಿ ಆಗಮಿಸಿದ ತಾಲೂಕು ಉಸ್ತುವಾರಿ ಅಬ್ದುರ್ರಶೀದ್ ಸಖಾಫಿ ಗಡಿಯಾರ ರವರ ನೇತೃತ್ವದಲ್ಲಿ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ಆಯ್ಕೆಗೆ ಚಾಲನೆ ನೀಡಲಾಯಿತು.

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ನೂತನಾಧ್ಯಕರಾಗಿ ಪಿ.ಎಸ್.ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಕೋಶಾಧಿಕಾರಿಯಾಗಿ ರಫೀಕ್ ಮದನಿ ಅಲ್ ಕಾಮಿಲ್ ಆಯ್ಕೆಯಾದರು. ಸಂಘಟನಾ ಉಪಾಧ್ಯಕ್ಷರಾಗಿ ಮಹ್ಬೂಬ್ ಸಖಾಫಿ ಕಿನ್ಯ, ಅಧ್ಯಯನಾ ಉಪಾಧ್ಯಕ್ಷರಾಗಿ ಹನೀಫ್ ಸಖಾಫಿ ಕಿನ್ಯ, ಕ್ಷೇಮನಿಧಿ ಉಪಾಧ್ಯಕ್ಷರಾಗಿ ಮುತ್ತಲಿಬ್ ಸಖಾಫಿ ಬೆಳ್ಮ, ಸಂಘಟನಾ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಉಳ್ಳಾಲ, ಅಧ್ಯಯನಾ ಕಾರ್ಯದರ್ಶಿಯಾಗಿ ನಿಸಾರ್ ಸಖಾಫಿ ಉಳ್ಳಾಲ, ಕ್ಷೇಮನಿಧಿ ಕಾರ್ಯದರ್ಶಿಯಾಗಿ ಹಕೀಂ ಸಖಾಫಿ ಕಾಟಿಪಳ್ಳ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನವಾಝ್ ಸಖಾಫಿ ಅಡ್ಯಾರ್ ಪದವು, ಪೂಡಲ್ ಮುಹಮ್ಮದ್ ಸಖಾಫಿ, ಮುಹ್ಯಿದ್ದೀನ್ ಸಖಾಫಿ ನ್ಯೂಪಡ್ಪು, ಜುನೈದ್ ಸಖಾಫಿ ಬೆಳ್ಮ, ಫಾರೂಕ್ ಸಖಾಫಿ ಮದನಿನಗರ, ಶೌಕತ್ ಸಖಾಫಿ ಬೆಳ್ಮ, ಕರೀಂ ಸಖಾಫಿ ಬೈತಾರ್, ಉಸ್ಮಾನ್ ಸಖಾಫಿ ಕಣ್ಣೂರು, ಬಶೀರ್ ಸಖಾಫಿ ಉಳ್ಳಾಲ, ಹನೀಫ್ ಸಖಾಫಿ ನಾಟೆಕಲ್, ಹಾರಿಸ್ ಸಖಾಫಿ ಕಿನ್ಯ, ಶರೀಫ್ ಸಖಾಫಿ ಉರುಮಣೆ, ಅಝೀಝ್ ಸಖಾಫಿ ಉಳ್ಳಾಲ, ಫಾರೂಕ್ ಸಖಾಫಿ ಹಂಡೇಲು, ಹೈದರ್ ಸಖಾಫಿ ಇನೋಳಿ, ಸೈಫುದ್ದೀನ್ ಸಖಾಫಿ ಉಳ್ಳಾಲ, ಇಬ್ರಾಹಿಂ ಸಖಾಫಿ ತಲಪಾಡಿ, ಫಾರೂಕ್ ಸಖಾಫಿ ಕಾಟಿಪಳ್ಳ, ರಫೀಕ್ ಸಖಾಫಿ ಪಾವೂರು, ಹಸನ್ ಸಖಾಫಿ ಕೆಸಿರೋಡ್ ರವರನ್ನು ಆರಿಸಲಾಯಿತು.

ದ.ಕ ಜಿಲ್ಲಾ ಕೌನ್ಸಿಲರುಗಳಾಗಿ ಡಾ ಎಂ ಎಸ್ ಎಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ, ಕೆ ಕೆ ಎಂ ಕಾಮಿಲ್ ಸಖಾಫಿ, ಅಬ್ದುಸ್ಸತ್ತಾರ್ ಸಖಾಫಿ, ಮಹ್ಬೂಬ್ ಸಖಾಫಿ ಕಿನ್ಯ, ಅಶ್ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿ, ಅಬೂಸ್ವಾಲಿಹ್ ಕಾಮಿಲ್ ಸಖಾಫಿ, ಉಸ್ಮಾನ್ ಸಖಾಫಿ ಕಣ್ಣೂರು, ಪೂಡಲ್ ಮುಹಮ್ಮದ್ ಸಖಾಫಿ, ಮುಹಮ್ಮದ್ ಸಖಾಫಿ ಮೊಂಟೆಪದವು, ಅಬ್ದುಲ್ ಅಝೀಝ್ ಸಖಾಫಿ ಮುಳ್ಳುಗುಡ್ಡೆ ಇವರನ್ನು ಆಯ್ಕೆ ಮಾಡಲಾಯಿತು.

ಬಳಿಕ ನೂತನಾಧ್ಯಕ್ಷರಾದ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಧನ್ಯವಾದಗೈದರು.

error: Content is protected !!
%d bloggers like this: