janadhvani

Kannada Online News Paper

ಉಜಿರೆ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( ರಿ.) SSF ದ.ಕ ಬ್ಲಡ್ ಸೈಬೋ ಇದರ 134 ನೇ ಕ್ಯಾಂಪ್,SSF ಉಜಿರೆ ಸೆಕ್ಟರ್ ಅಧೀನದಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್ ದೇರಳಕಟ್ಟೆ,ಮಂಗಳೂರು ಇದರ ಸಹಭಾಗಿತ್ವದಲ್ಲಿ ದಿನಾಂಕ 26.01.2020ನೇ ಅದಿತ್ಯವಾರ ಬದ್ರುಲ್ ಹುದಾ ಮದರಸ ಹಳೆಪೇಟೆ ಉಜಿರೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಮಾಚಾರು ವಹಿಸಿದ್ದರು.
ಈ ಕಾರ್ಯಕ್ರಮವನ್ನು ಸುನ್ನಿ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ಮದನಿ ತಂಙಳ್ ಉಜಿರೆ ದುಃಅ ನೆರವೇರಿಸಿದರು.MJM ಹಳೆಪೇಟೆ ಉಜಿರೆ ಖತೀಬರಾದ ಅಲ್‌ಹಾಜ್ B.A ಅಬ್ಬಾಸ್ ಮದನಿ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಬೆರ್ಕಳ ಬ್ಲಡ್ ಸೈಬೊ ಬಗ್ಗೆ ಮಾಹಿತಿ ನೀಡಿದರು.ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಯ್ಯಿದ್ S.M ಕೋಯ ತಂಙಳ್ ಹಾಗೂ SYS ಉಜಿರೆ ಬ್ರಾಂಚ್ ಅಧ್ಯಕ್ಷರಾದ ಹಾಜಿ ಹೈದರ್ ಮದನಿ ಆಶಂಸ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ SSF ದ.ಕ ಬ್ಲಡ್ ಸೈಬೋ ಸಂಚಾಲಕರಾದ ಕರೀಮ್ ಕೆದ್ಕಾರ್,SYS ಉಜಿರೆ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಶೀದ್ ಬಲಿಪಾಯ, ಉಪಾಧ್ಯಕ್ಷ ಮುಹಿಯುದ್ದೀನ್ ನಜಾತ್ ಕುಂಟಿನಿ, ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್, ಕೋಶಾಧಿಕಾರಿ ಇಬ್ರಾಹೀಂ ಅತ್ತಾಜೆ,
SSF ಬೆಳ್ತಂಗಡಿ ಡಿವಿಷನ್ ಬ್ಲಡ್ ಸೈಬೋ ಉಸ್ತುವಾರಿ ತೌಫೀಕ್ ವೇಣೂರು,ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಅತ್ತಾಜೆ, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
SSF ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಬೀನ್,ಉಜಿರೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ವರದಿ: ಎಂ.ಎಂ.ಉಜಿರೆ

error: Content is protected !!
%d bloggers like this: