ಕುವೈತ್: ಇಖಾಮಾ ಅವಧಿ ಮುಗಿದಲ್ಲಿ ಚಾಲನಾ ಪರವಾನಗಿ ರದ್ದು

ಕುವೈತ್ ಸಿಟಿ: ಕುವೈತ್‌ನಲ್ಲಿ ಸಾರಿಗೆ ಇಲಾಖೆಯು ವಿದೇಶಿಯರ ಚಾಲನಾ ಪರವಾನಗಿಗಳನ್ನು ಇಖಾಮಾ ಜೊತೆ ಜೋಡಿಸಲು ಪ್ರಾರಂಭಿಸಿದೆ. ಇಖಾಮಾ ಅವಧಿ ಮುಗಿದ ನಂತರ ಪರವಾನಗಿಯು ಸಾಮಾನ್ಯವಾಗಿ ರದ್ದಾಗುವಂತೆ ಯೋಜಿಸಲಾಗಿದ್ದು, ಎಲೆಕ್ಟ್ರಾನಿಕ್ ಕಿಯೋಸ್ಕ್ ಗಳಿಂದ ಪರವಾನಗಿ ನೀಡಲು ಆರಂಭಿಸಿದ ಬಳಿಕ ಸಾರಿಗೆ ಇಲಾಖೆ ಸುಧಾರಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಸಾರಿಗೆ ಇಲಾಖೆಯ ಆಕ್ಟಿಂಗ್ ಸೆಕ್ರೆಟರಿ ಮೇಜರ್ ಜನರಲ್ ಜಮಾಲ್ ಅಲ್ ಸಾಯಿಗ್ ಈ ಬಗ್ಗೆ ತಿಳಿಸಿದರು.

ಚಾಲನಾ ಪರವಾನಗಿ ಮತ್ತು ಇಕಾಮಾ ಅವಧಿಯ ನಡುವಿನ ಸಂಬಂಧವನ್ನು ಅಧ್ಯಯನ ನಡೆಸಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವಿದೇಶಿಯರ ಪರವಾನಗಿಯನ್ನು ಐದು ವರ್ಷಗಳಿಗೆ ವಿಸ್ತರಿಸಲು ಯೋಜಿಸಲಾಗಿದ್ದು, ಈ ಮಧ್ಯೆ, ಇಖಾಮಾ ಅವಧಿ ಮುಗಿದಿದ್ದರೆ, ಪರವಾನಗಿಯನ್ನು ಸಹ ರದ್ದುಗೊಳಿಸಲಾಗುತ್ತದೆ.

ಸಂಚಾರ ಉಲ್ಲಂಘನೆಗಾಗಿ ದಂಡ ವಿಧಿಸಲ್ಪಟ್ಟಿದ್ದರೆ, ದಂಡ ಪಾವತಿಸದ ಹೊರತು ಇಕಾಮಾವನ್ನು ನವೀಕರಿಸಲಾಗುವುದಿಲ್ಲ. ಚಾಲಕರ ಪರವಾನಗಿ ಅರ್ಜಿ ಮತ್ತು ನವೀಕರಣವನ್ನು ಆನ್‌ಲೈನ್‌ನಲ್ಲಿ ಮಾಡಿದ ಒಂದು ತಿಂಗಳ ಬಳಿಕ ಇದೀಗ ಪರವಾನಗಿಯ ಮತ್ತೊಂದು ಮಹತ್ವದ ಪರಿಷ್ಕರಣೆ ಬರುತ್ತಿದೆ. ಸ್ವಯಂ ಸೇವಾ ಕಿಯೋಸ್ಕ್ ಮೂಲಕ ಬಳಕೆದಾರರಿಗೆ ಚಾಲನಾ ಪರವಾನಗಿ ನೀಡುವ ಸ್ವಯಂಚಾಲಿತ ವ್ಯವಸ್ಥೆಯು ಈ ತಿಂಗಳ 18 ರಿಂದ ಜಾರಿಯಲ್ಲಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!