janadhvani

Kannada Online News Paper

SYS ತುಂಬೆ 2019-20 ನೇ ಸಾಲಿನ ನೂತನ ಸಾರಥಿಗಳು

ತುಂಬೆ: SYS ತುಂಬೆ ಸೆಂಟರ್ ಇದರ ರಚನೆಯ ಅಂಗವಾಗಿ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ SSF ತುಂಬೆ ಶಾಖೆ ಅಧ್ಯಕ್ಷರಾದ ಬಹು|ಮುಶ್ತಾಖ್ ಮದನಿ ಉಸ್ತಾದರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು.

ಮುಖ್ಯ ಅತಿಥಿ ಹಾಗು SYS ರಚನಾ ಮುಖ್ಯಸ್ಥರಾಗಿ ಆಗಮಿಸಿದ SYS ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಜಿಂ.ಎಂ ಕಾಮಿಲ್ ಸಖಾಫಿಯವರು ಸಂಘಟನಾ ತರಗತಿ ನಡೆಸಿ ,SYS ತುಂಬೆ ಸೆಂಟರ್ 2019-20 ನೇ ಸಾಲಿನ ನೂತನ ಸಮಿತಿಯನ್ನು ರಚಿಸಿದರು.

ಅಧ್ಯಕ್ಷರಾಗಿ ಹನೀಫ್ ಎಂ.ಎ, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಎಸ್.ಬಿ.

ಉಪಾಧ್ಯಕ್ಷರಾಗಿ ಅಬೂಬಕ್ಕರ್,ಇಬ್ರಾಹಿಂ ಮಲ್ಲಿ. ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಇಸ್ಮಾಯಿಲ್.ಟಿ, ಟೀಮ್ ಇಸಾಬಾ ಕನ್ವಿನರ್ ಆಗಿ ಅಬೂಬಕ್ಕರ್ ಕೆ.ಪಿ ಹಾಗು ಇಸ್ಮಾಯಿಲ್.ಪಿ ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೋಯಿದ್ದೀನ್ ಬ್ಯಾಂಕ್, ಅಬೂಬಕ್ಕರ್ ಕೆ.ಪಿ, ಅದಂ ಟಿ.ಎ, ಇಸ್ಮಾಯಿಲ್ ಹಾಗು ಅಹ್ಮದ್ ಭಾವ ಇವರನ್ನು ಆರಿಸಲಾಯಿತ್ತು.

ಕಾರ್ಯಕ್ರಮದ ಕೊನೆಯಲ್ಲಿ SSF ತುಂಬೆ ಶಾಖೆ ಪ್ರ,ಕಾರ್ಯದರ್ಶಿ ನೌಶಾದ್ ದನ್ಯವಾದಗೈದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!