janadhvani

Kannada Online News Paper

ಕಂಡತ್ ಪಳ್ಳಿ ಜುಮಾ ಮಸೀದಿ ಯಲ್ಲಿ ಮೀಲಾದ್ ಕಾರ್ಯ ಕ್ರಮ

ಮಂಗಳೂರು :ಕಂಡತ್ ಪಳ್ಳಿ ಜುಮಾ ಮಸೀದಿ ಮಂಗಳೂರು ಇದರ ಅಧೀನದಲ್ಲಿ ರುವ ಮುಹಮ್ಮದೀಯ ಮದ್ರಸ ವಿಧ್ಯಾರ್ಥಿಗಳಿಂದ ಪ್ರವಾದಿ ಮಹಮ್ಮದ್ ಮುಸ್ತಫ ಸಲ್ಲಲ್ಲಾಹು ಅಲೈವಹಿಸ್ಸಲ್ಲಂರವರ ಜನ್ಮ ಮಾಸಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಮಸೀದಿ ಅಧ್ಯಕ್ಷ ರಾದ ಮಾಜಿ ಮೇಯರ್ ಅಧ್ಯಕ್ಷ ತೆಯಲ್ಲಿ ನಡೆಯಿತು.

ಖತೀಬರಾದ ಪಿ ಎ ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ಕೆಲವು ಹಿತವಚನದೊಂದಿಗೆ ಸರ್ವರನ್ನೂ ಸ್ವಾಗತಿಸಿ ದರು. ಈ ಸಂದರ್ಭದಲ್ಲಿ ವೇದಿಕೆಯ ಲ್ಲಿ ಸದರ್ ಉಸ್ತಾದ್ ಮುಹಮ್ಮದ್ ಷರೀಫ್ ಸಖಾಫಿ, ಮದ್ರಸ ಶಿಕ್ಷಕರಾದ ಉಮರ್ ಮದನಿ, ಅಬೂಬಕ್ಕರ್ ಮದನಿ ಹಾಗೂ ಆಡಳಿತ ಸಮಿತಿಯ ಉಪಾಧ್ಯಕ್ಷ ಸಮೀಮ್ ಪ್ರಧಾನ ಕಾರ್ಯದರ್ಶಿ ಹಾಮದಾಕ ಕೋಶಾಧಿಕಾರಿ ಪಾರೂಕು ಸದಸ್ಯ ರಾದ ಹಸನಬ್ಬ, ಮಹ್ ಮೂದ್, ಅಬ್ದುಲ್ ರಹಿಮಾನ್, ಸ್ಥಳೀಯ ನಾಯಕರಾದ ಸಂಶುದ್ದೀನ್, ಅಶ್ರಪ್ ಕಿನಾರ ಉಪಸ್ಥಿತರಿದ್ದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!