ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅಳವಡಿಸೋಣ- ಕೆ.ಸಿ.ಎಫ್ ಸ್ನೇಹ ಸಂಗಮದಲ್ಲಿ ಸಿದ್ದೀಕ್ ಸಖಾಫಿ

“ಹಬೀಬ್ (ಸ.ಅ) ನಮ್ಮ ಜತೆಗಿರಲಿ” ಎಂಬ ದ್ಯೇಯ ವಾಕ್ಯದಲ್ಲಿ KCF ನಡೆಸುತ್ತಿರುವ ಸ್ನೇಹ ಸಂಗಮದ ಭಾಗವಾಗಿKCF ಅಲ್ ಖಸಿಂ ರೋನ್ ಅಧೀನದ ಅಲ್ ರಾಸ್ ಯೂನಿಟ್’ನಲ್ಲಿ 21-11-19 ರಂದು ನಡೆದ ಸ್ನೇಹ ಸಂಗಮ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.ಕೆ.ಸಿ.ಎಫ್ ಅಲ್ ರಾಸ್ ಯೂನಿಟ್ ಅಧ್ಯಕ್ಷರಾದ ರಶೀದ್ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನುಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಉದ್ಘಾಟಿಸಿದರು.ಪ್ರವಾದಿ ಪ್ರೇಮಿಗಳ ಮನ ತಣಿಸುವ ತನ್ನ ಸುಶ್ರಾವ್ಯ ಶಬ್ದ ಮಾದುರ್ಯದಿಂದ ಆಶೀಕ್’ಗಳನ್ನು ಮದೀನಾದತ್ತ ಕೊಂಡೊಯಿದ ಅನುಗ್ರಹೀತ ಗಾಯಕ ಯೂಸುಫ್ ಮದನಿ ಉಸ್ತಾದ್ ಮತ್ತು ತಂಡದವರು ಸುಮಧುರವಾಗಿ ಮದ್ಹ್ ಗಾನ ಆಲಾಪಿಸಿದರು.ಇಹಪರ ವಿಜಯಕ್ಕಾಗಿ ಪ್ರವಾದಿ(ಸ.ಅ)ರವರ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಪೂರ್ವಿಕ ಮಹಾತ್ಮರುಗಳ ಹಾದಿಯಲ್ಲಿ ಮುನ್ನಡೆದು ಪವಿತ್ರವಾದ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾಗಿ ಜೀವಿಸಬೇಕೆಂದು , ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿಯಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉಸ್ತಾದ್ ಕರೆ ನೀಡಿದರು.ವಿಶ್ವ ಪ್ರವಾದಿ(ಸ.ಅ)ರವರ ಸುನ್ನತ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಶರೀರಕ್ಕಿಂತಲೂ ಹೆಚ್ಚಾಗಿ ಅವರನ್ನು ಪ್ರೀತಿಸಿ ಹಬೀಬ್(ಸ.ಅ) ನಮ್ಮ ಜತೆಗಿರಲಿ ಎಂಬ ವಾಕ್ಯವನ್ನು ಅಥ೯ ಪೂಣ೯ಗೊಳಿಸೋಣವೆಂದು ಕಿವಿ ಮಾತು ಹೇಳಿದರು.ಕೆ.ಸಿ.ಫ್ ಅಲ್ ಕಸೀಮ್ ಝೋನ್ ನ ಪ್ರಮುಖ ನೇತಾರರುಗಳು ಭಾಗವಹಿಸಿದರು.ICF, RSC, KiSWA ಮುಂತಾದ ಸಂಘಟನೆಗಳ ನೇತಾರರು ಭಾಗವಹಿಸಿ ಕಾರ್ಯ ಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದರು.ಹಸನ್ ಮದನಿ ಸ್ವಾಗತಿಸಿ ಇಸಾಕ್ ಬಾ ಹಸನಿ ವಂದಿಸಿದರು.ವರದಿ :- ಬಶೀರ್ ಕನ್ಯಾನಬುರೈದ ಸೆಕ್ಟರ್

Leave a Reply

Your email address will not be published. Required fields are marked *

error: Content is protected !!