janadhvani

Kannada Online News Paper

ಕೆ.ಸಿ.ಎಫ್.ಅಬುಧಾಬಿ ಝೋನ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ಗೆ ಉಜ್ಜ್ವಲ ಸಮಾಪ್ತಿ

ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಬುಧಾಬಿ ಝೋನ್,ಪ್ರವಾದಿ ಮುಹಮ್ಮದ್ (ಸ ಅ) ಜನ್ಮ ದಿನದ ಅಂಗನವಾಗಿ ವರ್ಷಮ್ ಪ್ರತಿ ನಡೆಸಿ ಕೊಂಡು ಬರುವ ಮಿಲಾದ್ ಕಾನ್ಫರೆನ್ಸ್ ಅತಿ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ನವೆಂಬರ್ 15 ರಂದು ಅಬುಧಾಬಿ ಸುಡಾನಿ ಸಭಾಂಗಣದಲ್ಲಿ ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಮುಹಮ್ಮದಲಿ ಬ್ರೈಟ್ ವಳವೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸುನ್ನೀ ಕೋಆರ್ಡಿನೆಶನ್ ರಾಜ್ಯ ಅಧ್ಯಕ್ಷರಾದ ಎಸ್.ಪಿ.ಹಂಝ ಸಖಾಫಿ ಕಾರ್ಯ ಕ್ರಮ ಉದ್ಘಾಟಿಸಿದರು. ಖ್ಯಾತ ವಾಗ್ಮಿ , ಬಹು: ಹಾಫಿಲ್ ಮಸ್ಊದ್ ಸಖಾಫಿ ಗೂಡಲ್ಲೂರ್ ಆಗಮಿಸಿ ಹುಬ್ಬುರಸೂಲ್ ಮುಖ್ಯ ಪ್ರಾಭಾಷಣ‌ಗೈದರು.

ಅಸ್ಯೆಯ್ಯದ್ ಝೈನುಲ್ ಆಭೀದಿನ್ ಮುತ್ತು ಕೋಯ ತಂಙಳ್ ಕಣ್ಣವಂ ದುಃಅ ಆಶಿರ್ವಚನ ನಡೆಸಿದರು.ಕೆ.ಸಿ.ಎಫ್ ಅಂತಾರಾಷ್ಟ್ರೀಯ ಫಿನಾನ್ಸ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರ ಮಂಗಳ , ಸಂಘಟನಾ ಅಧ್ಯಕ್ಷರಾದ ಪಿ.ಎಂ.ಎಮ್.ಅಬ್ದುಲ್ ಹಮೀದ್ ಈಶ್ವರ ಮಂಗಳ,ಐ.ಸಿ.ಎಫ್‌.ಯು‌.ಎ.ಇ.ರಾಷ್ಟ್ರಿಯ ಅಧ್ಯಕ್ಷರಾದ ಮುಸ್ತಫ ದಾರಿಮಿ, ಎಸ್.ವೈ.ಎಸ್ . ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಅಲ್ ಖಾಮಿಲ್ ಸಖಾಫಿ ,ಖ್ಯಾತ ಉದ್ಯಮಿ ಬನಿಯಾಸ್ ಸ್ಪೈಕ್ ಕಂಪನಿ ಮಾಲೀಕರಾದ ಕುಟ್ಟುರ್ ಅಬ್ದುಲ್ ರಹಿಮಾನ್ ಹಾಜಿ ,ಕೆ.ಸಿ.ರಾಷ್ಟ್ರೀಯ ಕೊಶಾದಿಕಾರಿ.ಇಬ್ರಾಹೀಂ ಬ್ರೈಟ್ ಮಾರ್ಬಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೆ.ಸಿ.ಎಫ್ ಅಬುಧಾಬಿ ಪ್ರತಿಭೆಗಳಿಂದ ಬುರ್ದಾ ಆಲಾಪನೆ,ನಅತೆ ಶರೀಫ್, ದಫ್ಫ್ ಪ್ರದರ್ಶನ ನಡೆಯಿತು.ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಸ್ವಾಗತಿಸಿ.

ಸ್ವಾಗತ ಸಮಿತಿಜನರಲ್ ಕನ್ವೀನರ್ ಅಬ್ದುಲ್ ಹಕೀಮ್ ತುರ್ಕಳಿಕೆ ವಂದಿಸಿದರು.ಝೋನ್ ಇಹ್ಸಾನ್ ಕನ್ವಿನರ್ ಹಫೀಳ್ ‌ಸಇದ್ ಹನೀಪಿ ಮೂರುರು ಕಾರ್ಯ ಕ್ರಮ ನಿರೂಪಿಸಿದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!