janadhvani

Kannada Online News Paper

KCF ಅಬುಧಾಬಿ ಝೋನ್ ವತಿಯಿಂದ ಬ್ರಹತ್ ಅಂತಾರಾಷ್ಟ್ರೀಯ ಮೀಲಾದ್ ಕಾನ್ಫರೆನ್ಸ್ ನವೆಂಬರ್ 15ರಂದು

ಅನಿವಾಸಿ ಕನ್ನಡಿಗರ ಹೆಮ್ಮೆಯ ಬಹುದೊಡ್ಡ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ಝೋನ್ ವತಿಯಿಂದ ಜಿ.ಸಿ.ಸಿ.ಯಲ್ಲಿಯೇ ಅತೀ ದೊಡ್ಡ ಬ್ರಹತ್ ಅಂತಾರಾಷ್ಟ್ರೀಯ ಮಿಲಾದ್ ಕಾನ್ಫರೆನ್ಸ್ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ನವೆಂಬರ್ 15 ರಂದು ಅಬುಧಾಬಿ ಸುಡಾನಿ ಸಭಾಂಗಣದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಮುಹಮ್ಮದಲಿ ವಳವೂರ್ ತಿಳಿಸಿದರು.

ಪ್ರಸ್ತುತ ಕಾರ್ಯಕ್ರಮಕ್ಕೆ ಮುಖ್ಯ ಭಾಷಣ ‌ಗಾರರಾಗಿ ಖ್ಯಾತ ವಾಗ್ಮಿ ,ಪ್ರಭಾಷಣ ಲೋಕದ ಮಿನುಗು ತಾರೆ, ತನ್ನ ವಾಕ್ ಚಾತುರ್ಯದ ಮೂಲಕ ಜನ ಮನ ಗೆದ್ದ ,ಯುವಕರ ಆವೇಶ ಬಹು: ಹಾಫಿಲ್ ಮಸ್ಊದ್ ಸಖಾಫಿ ಗೂಡಲ್ಲೂರ್ ಆಗಮಿಸಿ ಹುಬ್ಬುರಸೂಲ್ ಪ್ರಭಾಷಣ ನಡೆಸಲಿದ್ದಾರೆ. ಅಸ್ಯೆಯ್ಯದ್ ಝೈನುಲ್ ಆಭೀದಿನ್ ಮುತ್ತು ಕೋಯ ತಂಙಳ್ ದುಃಅ ಆಶಿರ್ವಚನ ನಿಡಲಿದ್ದಾರೆ.

ಅಲ್ಲದೆ ಕೆ.ಸಿ.ಎಫ್ ಅಬುಧಾಬಿ ಪ್ರತಿಭೆಗಳಿಂದ ಬುರ್ದಾ ಆಲಾಪನೆ,ನಅತೆ ಶರೀಫ್,ಕವ್ವಾಲಿ, ದಫ್ಫ್ ಪ್ರದರ್ಶನ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಇನ್ನೂ ಹಲವು ಧಾರ್ಮಿಕ, ಸಾಮಾಜಿಕ ಉಲಮಾ ಉಮರ ನಾಯಕರು ಆಗಮಿಸಲಿದ್ದು ತಾವೆಲ್ಲರೂ ಸಂಜೆ 5 ಘಂಟೆಯಿಂದ ನಡೆಯುವ ಕಾರ್ಯಕ್ರಮ ತಮ್ಮ ಕುಟುಂಬ, ಸ್ನೇಹಿತ ಬಳಗ ಸಮೇತ ಹಾಜರಾಗಿ ಸಹಕರಿಸಬೇಕೆಂದು ಕೆಳಿಕೊಳ್ಳುತ್ತೇವೆ.ಕಾರ್ಯ ಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಕಲ್ಪಿಸಲಾಗಿದೆ.

ಅಬ್ದುಲ್ ಹಕೀಮ್ ತುರ್ಕಳಿಕೆ
(ಜನರಲ್ ಕನ್ವೀನರ್
ಗ್ರಾಂಡ್ ಮೀಲಾದ್ ಸಮಾವೇಶ ಸ್ವಾಗತ ಸಮಿತಿ)
ಕೆ ಸಿ ಎಫ್ ಅಬುಧಾಬಿ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!