janadhvani

Kannada Online News Paper

ನವಂಬರ್ 15: KCF ಒಮಾನ್ “ಐ ಟೀಮ್” ವತಿಯಿಂದ ಮೀಲಾದ್ ಕಾನ್ಫರೆನ್ಸ್

ಒಮಾನ್: ಪ್ರವಾದಿಮುಹಮ್ಮದ್(ಸ.ಅ)ರವರ

1494 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕೆಸಿಎಫ್ ಒಮಾನ್ ಅದೀನದಲ್ಲಿ ಕಾರ್ಯಾಚರಿಸುತ್ತಿರುವ “ಐ ಟೀಮ್” ವತಿಯಿಂದ ನವಂಬರ್ 15 ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಬರ್ಕ ರೆಸಿಡೆನ್ಸಿ, ಬರ್ಕಾದಲ್ಲಿ ಮೀಲಾದ್ ಕಾನ್ಫರೆನ್ಸ್, ಹಾಗೂ ಬುರ್ಧಾ ಮಜ್ಲಿಸ್ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶೈಖುನಾ ಎ.ಪಿ ಮುಹಮ್ಮದ್ ಮುಸ್ಲಿಯಾರ್ ನೇತೃತ್ವ ನೀಡಲಿದ್ದಾರೆ. ಕೂಟ್ಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಉಸ್ತಾದ್ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ. ಶುಕೂರ್ ಇರ್ಫಾನಿ ಚೆಂಬರಿಕ ಇವರಿಂದ ಬುರ್ಧಾ ಮಜ್ಲಿಸ್ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶೈಖ್ ಸಾಲಿಂ ಮುಹಮ್ಮದ್ ಅಲ್ ಸಿಯಾಬಿ, ಕೆಸಿಎಫ್ ಒಮಾನ್ ಸಂಘಟನಾಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸಿ, KCF ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, KCF ಒಮಾನ್ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಶಫೀಕ್ ಬುಖಾರಿ ICF ಒಮಾನ್, ಕೆಸಿಎಫ್ ನಾಯಕರುಗಳು, ICF, RSC ನಾಯಕರುಗಳು ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.

ಎಂದು ಕೆಸಿಎಫ್ ಒಮಾನ್ “ಐ ಟೀಮ್” ಚೇರ್ಮೇನ್ ಇಕ್ಬಾಲ್ ಬೊಳ್ಮಾರ್ ಬರ್ಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!