janadhvani

Kannada Online News Paper

ಯುಎಇ: ಕೆಸಿಎಫ್ ಅಲ್’ಐನ್ ಝೋನ್ ವತಿಯಿಂದ ಪ್ರತಿಭೋತ್ಸವ

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಐನ್ ಝೋನ್ ವತಿಯಿಂದ ಅರಿವಿನ‌ ಕ್ರಾಂತಿಗೆ ಪ್ರತಿಭೆಗಳ ನಡಿಗೆ ಎಂಬ ಶೀರ್ಷಿಕೆಯಡಿ ಝೋನ್ ಮಟ್ಟದ ಪ್ರತಿಭೋತ್ಸವ 2019 ಕಾರ್ಯಕ್ರಮವನ್ನು ನವೆಂಬರ್ 8 ರಂದು ಅಲ್ ಐನ್ ಕೆಸಿಎಫ್ ಕಛೇರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

ಅನಿವಾಸಿ ಕನ್ನಡಿಗ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ವಿವಿಧ ರೀತಿಯ ಪ್ರತಿಭಾ ಸ್ಪರ್ಧೆ ನಡೆಸಲಾಯಿತು. ಕಿರಾಅತ್, ಭಾಷಣ, ಹಾಡುಗಾರಿಕೆ, ಕ್ವಿಜ್, ಖಾದ್ಯ ತಯಾರಿಕೆ, ಕಸದಿಂದ ರಸ ಮುಂತಾದ ಹಲವಾರು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಝೋನ್ ಅಧ್ಯಕ್ಷರಾದ ಹಾಫಿಲ್ ಸಫ್ವಾನ್ ಸಖಾಫಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಉಸ್ಮಾನ್ ಸಖಾಫಿ, ಇಮ್ತಿಯಾಜ್ ಬೈರಿಕಟ್ಟೆ, ರಜಬ್ ನಾವುಂದ ಮತ್ತಿತರರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!