janadhvani

Kannada Online News Paper

ಗೃಹ ಕೆಲಸಕ್ಕೆ ಆಗಮಿಸುವವರಿಗೆ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಕಡ್ಡಾಯ

ಮನಾಮ: ಬಹ್ರೈನ್‌ಗೆ ಗೃಹ ಕೆಲಸದ ವೀಸಾಗಳಲ್ಲಿ ಆಗಮಿಸುವವರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಆರೋಗ್ಯ ತಪಾಸಣೆಯನ್ನು ಮಾಡುವಂತೆ ಸಂಸತ್ತು ಶಿಫಾರಸು ಮಾಡಿದ್ದು, ಐವರು ಸಂಸದರು ಈ ಬಗ್ಗೆ ಮಾತನಾಡಿ ಆರೋಗ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಪ್ರಸ್ತಾಪವನ್ನು ಮುಂದಿಡಲಾಗಿದೆ ಎಂದು ಹೇಳಿದ್ದಾರೆ.

ದೇಶಕ್ಕೆ ಪ್ರವೇಶಿಸುವ ಮೊದಲು ಗೃಹ ಕಾರ್ಮಿಕರು ಮತ್ತು ಇತರ ಗೃಹ ಸಂಬಂಧಿತ ಕಾರ್ಮಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಸಂಸತ್ತಿನ ಸಂಸದರು ಶಿಫಾರಸು ಮಾಡಿದ್ದಾರೆ. ಫಾತಿಮಾ ಅಲ್-ಖತಾರಿ ನೇತೃತ್ವದ ಐವರು ಸಂಸದರು ಈ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಅಗತ್ಯವಾದ ವೈದ್ಯಕೀಯ ತಪಾಸಣೆಗೆ ಮೊದಲು ಚಾಲಕರು, ತೋಟಗಾರಿಕೆ ತಜ್ಞರು ಮತ್ತು ಗೃಹ ದಾದಿಯರು ಕೆಲಸ ಮಾಡದಂತೆ ತಡೆಯುವ ಅವಶ್ಯಕತೆಯಿದೆ ಎಂದು ಸಂಸದರು ಹೇಳಿದರು.

ಪ್ರಸ್ತುತ, ಗೃಹ ಕಾರ್ಮಿಕರು ವೈದ್ಯಕೀಯ ಅನುಮತಿ ಪಡೆಯುವ ಮೊದಲೇ ಹಲವಾರು ದಿನಗಳವರೆಗೆ ಮನೆಯಲ್ಲಿಯೇ ಉಳಿದು ಕೊಳ್ಳುವ ಪರಿಪಾಠವಿದೆ. ಈ ಮೂಕ ಹಲವು ರೋಗಗಳು ಹರಡುವ ಸಂಭವವಿದೆ. ವಿಮಾನ ನಿಲ್ದಾಣಗಳಿಂದ ವೈದ್ಯಕೀಯ ಅನುಮತಿ ಪಡೆದ ನಂತರವೇ ಕೆಲಸಗಳಿಗೆ ನೇಮಕಗೊಳಿಸಿದರೆ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಸಾಧ್ಯ ಎಂದು ಸಂಸದರು ಸೂಚಿಸಿದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!