janadhvani

Kannada Online News Paper

ಕೆಸಿಎಫ್ ಅಜ್ಮಾನ್: ನ.15ಕ್ಕೆ ಬೃಹತ್ ಮಿಲಾದ್ ಸಮಾವೇಶ- ಪ್ರಭಾಷಕರಾಗಿ ರಾಫೀ ಅಹ್ಸನಿ

ಅಜ್ಮಾನ್: ಸತ್ಯ, ನೀತಿ, ಶಾಂತಿ, ಸಮಾನತೆ ಸಮಾನತೆಯ ಸಂದೇಶ ವಾಹಕ ಲೋಕಾನುಗ್ರಹಿ ಹಝ್ರತ್ ಫೈಗಂಬರ್ ಮುಹಮ್ಮದ್ ಸ.ಅ ರವರ 1494 ನೇ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಅಜ್ಮಾನ್ ಯುಎಇ ಯು ತಾರೀಕು 15/11/2019 ನೇ ಶುಕ್ರವಾರ ಯುಎಇ ಸಮಯ ಮಧ್ಯಾಹ್ನ ಒಂದು ಗಂಟೆಗೆ ಅಜ್ಮಾನ್ ನ ಹೃದಯ ಭಾಗದಲ್ಲಿರುವ ಕ್ರೌನ್ ಪ್ಯಾಲೇಸ್ ಹೋಟೆಲ್ ನಲ್ಲಿ “ಪ್ರವಾದಿ ನಮ್ಮ ಜತೆಗಿರಲಿ” ಎಂಬ ಘೋಷವಾಕ್ಯದೊಂದಿಗೆ ಬೃಹತ್ ಈದ್ ಮಿಲಾದ್ ಕಾನ್ಫರೆನ್ಸ್-19 ನಡೆಯಲಿದೆ.

ಅಸ್ಸಯ್ಯದ್ ಝೈನುಲ್ ಆಬಿದೀನ್ ಮುತ್ತುಕೊಯ ತಂಙಲ್ ಕಾರ್ಯಕ್ರಮದ ನೇತೃತ್ವ ಮತ್ತು ದುಆ ನೆರವೇರಿಸಲಿದ್ದಾರೆ. ಕೇರಳ ಮತ್ತು ಕರ್ನಾಟಕದಲ್ಲಿ ಚಿರಪರಿಚಿತರಾಗಿರುವ ಪ್ರಭಾಷಣ ಲೋಕದ ಧ್ರುವ ತಾರೆ ರಾಫೀ ಅಹ್ಸನಿ ಕಾಂತಪುರಂ ಉಪನ್ಯಾಸ ನೀಡಲಿದ್ದಾರೆ.

“ಸರ್ವರಲ್ಲೂ ಕರುಣೆ ತೋರಿರಿ” ಎಂಬ ಇಸ್ಲಾಮಿನ ಉದಾತ್ತವಾದ ಸಂದೇಶವನ್ನು ಸಾರುತ್ತಾ ಅಜ್ಮಾನಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘ ಶಕ್ತಿ ಕೆಸಿಎಫ್ ಹಲವಾರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕರ್ನಾಟಕದ ಅಭಿವೃದ್ದಿಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯಾಚರಿಸುತ್ತಿದೆ. ನಿರಾಶ್ರಿತರಿಗೆ ಆಶ್ರಯ ಯೋಜನೆ, ಶಿಕ್ಷಣ ಸಂಸ್ಥೆಗಳು, ಅಂಬ್ಯುಲೆನ್ಸ್ ಸೇವೆ, ಬಡ ಹೆಣ್ಣುಮಕ್ಕಳ ಮದುವೆ ಕಾರ್ಯಕ್ರಮ, ಮುಂತಾದ ಉತ್ತಮ ಕಾರ್ಯಾಚರಣೆಗಳೊಂದಿಗೆ ಅರಬ್ ರಾಷ್ಟಗಳು ಮಾತ್ರವಲ್ಲದೆ ಮಲೇಷ್ಯಾ ಮತ್ತು ಲಂಡನ್ ನಂತಹ ದೈತ್ಯ ರಾಷ್ಟ್ರಗಳಲ್ಲೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಂಡಿರಡಿರುತ್ತದೆ.

ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಮತ್ತು ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಈದ್ ಮಿಲಾದ್ ಸ್ವಾಗತ ಸಮಿತಿ ಸಂಚಾಲಕ ಅಬೂಬಕ್ಕರ್ ಸಿದ್ದೀಕ್ ಪಾಣೆಮಂಗಳೂರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!