janadhvani

Kannada Online News Paper

ಕೆಸಿಎಫ್ ದುಬೈ ಸೌತ್ ಝೋನ್: ಗ್ರಾಂಡ್ ಮೀಲಾದ್ ಕಾರ್ಯಕ್ರಮ ಯಶಸ್ವಿಗೆ ಕರೆ

ದುಬೈ : ಕೆ ಸಿ ಎಫ್ ದುಬೈ ಸೌತ್ ಜೋನ್ ಸಮಿತಿ ಆಶ್ರಯದಲ್ಲಿ “ಹಬೀಬ್ ನಮ್ಮ ಜತೆಗಿರಲಿ” ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ದುಬೈ ಹಾಲಿಡೇ ಇನ್ ಹೋಟೆಲ್ ನಲ್ಲಿ ನವೆಂಬರ್ 15 ರಂದು ಶುಕ್ರವಾರ ಸಂಜೆ 5 ಘಂಟೆಗೆ ನಡೆಯಲಿದೆ. ಪ್ರಮುಖ ಆತ್ಮೀಯ ಸೂಫೀವರ್ಯರೂ, ಶಿಕ್ಷಣ ತಜ್ಞರೂ ಆದ ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ತಂಙ್ಞಳ್ (ಪ್ರಧಾನ ಕಾರ್ಯದರ್ಶಿ, ಕೇರಳ ಮುಸ್ಲಿಂ ಜಮಾಅತ್ ) ರವರು ದುಆ ನೇತೃತ್ವವನ್ನು ನೀಡಲಿದ್ದಾರೆ.

ಮಿಲಾದ್ ಸ್ವಾಗತ ಸಮಿತಿ ಛೇರ್ಮನ್ ರಾದ ಇಕ್ಬಾಲ್ ಸಿದ್ದಕಟ್ಟೆ ಅದ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ರವರು ಉದ್ಘಾಟಿಸಲಿದ್ದಾರೆ. ಬಹುಭಾಷಾ ಪ್ರಭಾಷಣಾಗಾರರಾದ ಬಹು ಡಾ: ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಹುಬ್ಬುರಸೂಲು ಪ್ರಭಾಷಣ ಮಾಡಲಿದ್ದಾರೆ ಮತ್ತು ಪ್ರಮುಖ ಬುರ್ದಾ ಆಲಾಪನೆ ಗಾರರಾದ ಬಹು ಸಯ್ಯದ್ ತ್ವಾಹಾ ತಂಗಳ್ ಗಣೇಮಾರ್ ಬುರ್ದಾ ಆಲಾಪನೆ ಮಾಡಲಿದ್ದಾರೆ ಕೆಸಿಎಫ್ INC ಫೈನಾಸಿಯಲ್ ಕಂಟ್ರೋಲರ್ ರಾದ ಬಹು: ಹಮೀದ್ ಸಅದಿ, ಕೆಸಿಎಫ್ ಯುಎಇ ಅಧ್ಯಕ್ಷರಾದ ಬಹು: ಜಲೀಲ್ ನಿಝಾಮಿ ಎಮ್ಮೆಮಾಡು ಸೇರಿದಂತೆ ಹಲವಾರು ಉಲಮಾ ಉಮರಾ ನಾಯಕರುಗಳು, ಯು ಏ ಈ ಯ ಪ್ರಮುಖ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ದುಬೈನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಿಲಾದ್ ಸ್ವಾಗತ ಸಮಿತಿ ಪಧಾಧಿಕಾರಿಗಳು ಕಾರ್ಯಕ್ರಮದಲ್ಲಿ 1200ರಷ್ಟು ಜನರು ಪಾಲ್ಗೊಳ್ಳಲಿದ್ದು, ಹುಬ್ಬುರ್ರಸೂಲ್ ಭಾಷಣ, ಬುರ್ದಾ ಆಲಾಪನೆ, ಪ್ರಾರ್ಥನಾ ಸಂಗಮ, ಅಭಿನಂದನಾ ಸಮಾರಂಭ, ಮೌಲೂದ್ ಪಾರಾಯಣ, ನಡೆಯಲಿದ್ದು ಯುಎಇ ಯಲ್ಲಿರುವ ಎಲ್ಲಾ ಅನಿವಾಸಿಗಳು ಭಾಗವಹಿಸಿ ಸಹಕರಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು
ಬಹು: ಇಕ್ಬಾಲ್ ಸಿದ್ದಕಟ್ಟೆ (ಛೇರ್ಮನ್: ಮಿಲಾದ್ ಸ್ವಾಗತ ಸಮಿತಿ)
ಬಹು: ಶರೀಫ್ ಶಂಕೇಶ್ (ಜನರಲ್ ಕನ್ವೀನರ್: ಮೀಲಾದ್ ಸ್ವಾಗತ ಸಮಿತಿ)
ಬಹು: ಇಲ್ಯಾಸ್ ಮದನಿ ಬರ್ಷ (ಫೈನಾನ್ಸ್ ಹೆಡ್: ಮೀಲಾದ್ ಸ್ವಾಗತ ಸಮಿತಿ)
ಬಹು: ಅಬ್ದುಲ್ ಅಝೀಝ್ ಅಹ್ಸನಿ (ಅಧ್ಯಕ್ಷರು: KCF ಸೌತ್ ಝೋನ್)

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!